ಜಿಲ್ಲಾಸ್ಪತ್ರೆಗೆ ಅನುದಾನ ನೀಡಲಿದ್ದಾರೆ ಡಿಕೆಶಿ / DODABALLAPUR

ಚುಂಚೇಗೌಡ
ಚುಂಚೇಗೌಡ
Published on
ದೊಡ್ಡಬಳ್ಳಾಪುರ : ತಾಲೂಕಿಗೆ ಮಂಜೂರಾಗಿ ಭೂಮಿ ಪೂಜೆಯಾಗಿರುವ ಜಿಲ್ಲಾಸ್ಪತ್ರೆಗೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ಅನುದಾನ ನೀಡುವ ಮೂಲಕ ಜನಪರ ಕೆಲಸ ಮಾಡಲಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ, ಡಿಪಿಎ ಅಧ್ಯಕ್ಷ ಚುಂಚೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್​ ಅವರಿಗೆ ತಾಲೂಕಿನೊಂದಿಗೆ ಆತ್ಮೀಯ ಒಡನಾಟವಿದ್ದು, ಹಲವು ಪ್ರಮುಖ ನಾಯಕರೊಂದಿಗೆ ನಿರಂತರ ನಿಕಟ ಸಂಪರ್ಕ ಹೊಂದಿದ್ದಾರೆ. ಕನಕಪುರ ಕ್ಷೇತ್ರದಷ್ಟೇ ದೊಡ್ಡಬಳ್ಳಾಪುರ ಕ್ಷೇತ್ರಕ್ಕೂ ಆದ್ಯತೆ ನೀಡಲಿದ್ದಾರೆ. ನನೆಗುದಿಗೆ ಬಿದ್ದಿರುವ ಜಿಲ್ಲಾಸ್ಪತ್ರೆ ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಶಾಸಕ ವೆಂಕಟರಮಣಯ್ಯ ನೇತೃತ್ವದಲ್ಲಿ ತಾಲೂಕಿನ ಮುಖಂಡರು ಮನವಿ ಮಾಡುವಮೂಲಕ ಜಿಲ್ಲಾಸ್ಪತ್ರೆ ಕಾಮಗಾರಿಗೆ ಚಾಲನೆ ನೀಡಲು ಶ್ರಮವಹಿಸುತ್ತೇವೆ. ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿ ದೆಸೆಯಿಂದಲೂ ನಾಯಕತ್ವ ಗುಣ ಬೆಳೆಸಿಕೊಂಡಿರುವ ಡಿಕೆಶಿ ಅವರು ಪಕ್ಷಕ್ಕೆ ಬೆನ್ನೆಲುಬಾಗಿದ್ದಾರೆ ಎಂದರು.
2023ರಲ್ಲಿ ಅಧ್ಯಕ್ಷರಾಗಿ ಸಂಘಟನಾ ಚಾತುರ್ಯದಿಂದ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 40 ವರ್ಷಗಳ ರಾಜಕೀಯ ಜೀವನದ ಹೋರಾಟದಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಡಿಕೆಶಿ ಅವರು ಉತ್ತಮ ಆಡಳಿತ ನೀಡಲಿದ್ದಾರೆ ಎಂದರು.
ಸಿದ್ದರಾಮಯ್ಯ ವ್ಯಕ್ತಿ ಅಲ್ಲ ಶಕ್ತಿ: ಗಣಿ ಧೂಳಿನಿಂದ, ರಾಜಕೀಯ ಅರಾಜಕತೆಯಿಂದ ಅಕ್ಷರಶ@ ನಲುಗಿ ಹೋಗಿದ್ದ ಬಳ್ಳಾರಿಗೆ ಪಾದಯಾತ್ರೆ ಮಾಡಿಪಕ್ಷದ ಗೆಲುವಿಗೆ ಮುನ್ನುಡಿ ಬರೆದವರು ಸಿದ್ದರಾಮಯ್ಯ. 2013 ರಿಂದ 2018ವರೆಗಗಿನ ಆಡಳಿತ ಒಂದು ದೊಡ್ಡ ಇತಿಹಾಸ. ರಾಜಕೀಯವಾಗಿ ದೊಡ್ಡ ಮಟ್ಟಕ್ಕೆ ಬೆಳೆದು ಸಾಮಾಜಿಕ ನ್ಯಾಯ ಸಾಕಾರಗೊಳಿಸಲು ಎದೆಗಾರಿಕೆಯಿಂದ ಶ್ರಮಿಸಿದ ಸಿದ್ದರಾಮಯ್ಯರಂತಹ ನಾಯಕರು ನಾಡಿಗೆ ಅತ್ಯಂತ ಅಪರೂಪ. ಅವರ ಅನುಭವ, ಮಾರ್ಗದರ್ಶನ ಸರ್ಕಾರಕ್ಕೆ ಇರಲಿದೆ ಎಂದು ಚುಂಚೇಗೌಡ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net