ಶಿಕ್ಷಣದೊಂದಿಗೆ ಕೌಶಲ ಬೆಳೆಸಿಕೊಳ್ಳಿ / VIJAYAPUR

ವಿಜಯಪುರದ ಶ್ರೀ ನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಬಿ.ವಿನಯ್​ ಕುಮಾರ್​, ನಗರ್ತ ಯುವಕ ಸಂಘದ ಅಧ್ಯಕ್ಷ ಬಸವರಾಜ್​, ಯೋಜನಾ ನಿರ್ದೇಶಕಿ ಎ.ಮಧು, ಸಂಘದ ಗೌರವಾಧ್ಯಕ್ಷ ಮ.ಸುರೇಶ್​ ಬಾಬು ಇತರರು ಇದ್ದರು.

Published on

ವಿಜಯಪುರ :

ವಿದ್ಯಾರ್ಥಿಗಳು ಶೈಕ್ಷಣಿಕ ಬೆಳವಣಿಗೆಗೆ ಆರ್ಥಿಕ ನೆರವು ನೀಡಿದವರನ್ನು ಸದಾ ನೆನಪಿಸಿಕೊಳ್ಳಬೇಕು. ಶಿಕ್ಷಣದ ಜತೆಗೆ ಕೌಶಲ ಬೆಳೆಸಿಕೊಂಡು ಉನ್ನತ ಅಧಿಕಾರಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ, ಶಿಕ್ಷಕ ಬಿ.ವಿನಯ್​ ಕುಮಾರ್​ ಹೇಳಿದರು.

ಪಟ್ಟಣದ ಶ್ರೀ ನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ನಗರ್ತ ಯುವಕ ಸಂಘ ಮತ್ತು ಕೋರಮಂಗಲ ರುದ್ರಪ್ಪ ಟ್ರಸ್ಟ್​ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸೌಲಭ್ಯ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಕೋರಮಂಗಲ ರುದ್ರಪ್ಪ ಟ್ರಸ್ಟ್​ ಅಧ್ಯಕ್ಷ ಸಿ.ಭಾಸ್ಕರ್​ ಮಾತನಾಡಿ, ಈ ಟ್ರಸ್ಟ್​ ಆರಂಭವಾದಾಗಿನಿಂದ ಹೊರಗಿನ ವಿದ್ಯಾರ್ಥಿಗಳಿಗೆ ವಸತಿ, ವಿದ್ಯಾರ್ಥಿವೇತನ, ದೇವಸ್ಥಾನಗಳ ಸೇವೆ ಹಾಗೂ ಜೀವರಾಶಿಗಳ ಪಾಲನೆ ಮಾಡಿಕೊಂಡು ಬಂದಿದೆ ಎಂದರು.

5 ಎಸ್ಸೆಸ್ಸೆಲ್ಸಿ ಹಾಗೂ 8 ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜತೆಗೆ 35 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸೌಲಭ್ಯ ವಿತರಿಸಲಾಯಿತು. ಈ ವೇಳೆ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಶಿವಶಂಕರ್​ ಅವರನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿ ಆರ್​.ವಿಶ್ವಾಸ್​, ಸಹ ಕಾರ್ಯದರ್ಶಿ ಸುಮನ್​, ಯೋಜನಾ ನಿರ್ದೇಶಕ ವಿ.ಹರ್ಷ, ಮಾಜಿ ಗೌರವಾಧ್ಯಕ್ಷ ಎನ್​.ರುದ್ರಮೂರ್ತಿ, ಬಿಸಿ ಸಿದ್ದರಾಜು, ಮಹಾಂತಿನಮಠ ಧರ್ಮ ಸಂಸ್ಥೆ ಅಧ್ಯಕ್ಷ ಪುನೀತ್​ ಶಿವಕುಮಾರ್​, ಮುಖಂಡರು, ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net