ಆಸ್ಪತ್ರೆಯ ಹಾಜರಾತಿಯಲ್ಲಿ ಸಹಿ ಮಾಡಿದ್ದರೂ ಕರ್ತವ್ಯ ನಾಲ್ವರು ವೈದ್ಯರು ಕರ್ತವ್ಯದಲ್ಲಿ ಇಲ್ಲದಿರುವುದು, ಆಸ್ಪತ್ರೆಯ ಮೆಡಿಕಲ್‌ಶ್ಾ ಬಾಗಿಲು ಹಾಕಿರುವುದು ಕಂಡುಬಂದಿದೆ. ಜತೆಗೆ ಅಧಿಕಾರಿ ಬಂದರೆಂದು ತರಾತುರಿಯಲ್ಲಿ ಆಸ್ಪತ್ರೆ ಸ್ವಚ್ಛತೆಗೆ ಮುಂದಾದ ದೃಶ್ಯಗಳು ಕಂಡುಬಂದಿವೆ. ಇವುಗಳನ್ನು ಗಮನಿಸಿದ ಎಸಿ ಮಂಜುನಾಥ್ ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಬಡಜನರು ಬರುವ ಈ ಆಸ್ಪತ್ರೆಯಲ್ಲಿ ವೈದ್ಯರ ಕೃತಕ ಕೊರತೆ ಸೃಷ್ಟಿಸುತ್ತಿರುವುದು ಏಕೆ? ಮೆಡಿಕಲ್‌ಶಾಪ್ ಬಂದ್ ಮಾಡಿರುವುದೇಕೆ? ತುರ್ತು ಪರಿಸ್ಥಿತಿಯಲ್ಲಿ ಹೆರಿಗೆಗೆ ಬರುವ ಗರ್ಭಿಣಿಯರ ಪಾಡೇನು ಎಂದು ಸಿಬ್ಬಂದಿ ವಿರುದ್ಧ ಗರಂ ಆದರು.