ಹೆಡ್ ಕಾನ್‌ಸ್ಟೇಬಲ್ ವಜ್ರ ಚೇತನ್, ವಿಪತ್ತು ನಿರ್ವಹಣೆಯ ಹಲವು ಮಜಲುಗಳ ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿಪತ್ತು ನಿರ್ವಹಣೆಯಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮದ ಕುರಿತು ವಿವರಿಸಿದರು.ಭೂಕಂಪ, ಪ್ರವಾಹ, ಸುನಾಮಿ, ಅಪಘಾತ, ಕಟ್ಟಡ ಕುಸಿತ, ನೆರೆ, ಅತೀವೃಷ್ಟಿ, ಅಗ್ನಿ ಅವಘಡ, ಅನಿಲ ಸೋರಿಕೆ ಸೇರಿ ಇತರೆ ವಿಪತ್ತುಗಳು ಸಂಭವಿಸಿದಾಗ ಅವುಗಳನ್ನು ಎದುರಿಸುವುದು ಹೇಗೆ? ಮುಂಜಾಗ್ರತ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು, ಹೇಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂಬುದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.