ಜಿಲ್ಲೆಯಲ್ಲಿ ಜಾನುವಾರು ಸಂಖ್ಯೆ ಇಳಿಮುಖ

declining in the district.
declining in the district.
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಕೃಷಿ ಪ್ರಧಾನವಾದ ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ನಾಲ್ಕೆ$ದು ವರ್ಷದ ಅವಧಿಯಲ್ಲಿ ಜಾನುವಾರುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಕೈಗಾರೀಕರಣ, ನಗರೀಕರಣದ ಜತೆಗೆ ದಿನೆ ದಿನೇ ದುಬಾರಿಯಾಗುತ್ತಿರುವ ಜಾನುವಾರು ಸಾಕಾಣೆ ವೆಚ್ಚ ರೈತಾಪಿ ಜನರನ್ನು ಹೈನುಗಾರಿಕೆ ಉದ್ಯಮದಿಂದ ಹೆಜ್ಜೆ ಹಿಂದಿಡುವಂತೆ ಮಾಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಕಳೆದ ಐದು ವರ್ಷದ ಹಿಂದಿನ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ 1,87,646 ರಾಸುಗಳ ಸಂಖ್ಯೆ ದಾಖಲಾಗಿತ್ತು, ಕಳೆದ ಎರಡೆ ವರ್ಷದಲ್ಲಿ ಅದು 1,56,330 ಸಂಖ್ಯೆಗೆ ಇಳಿಯಿತು ಅಂದರೆ 31,316 ರಾಸುಗಳ ಸಂಖ್ಯೆಯಲ್ಲಿ ಕುಸಿತ ಕಂಡಿತ್ತು. ಪ್ರಸಕ್ತ ಸಾಲಿನ ಅಂಕಿಅಂಶದಂತೆ ಜಿಲ್ಲೆಯಲ್ಲಿ 1.41,364 ಸಂಖ್ಯೆ ರಾಸುಗಳ ದಾಖಲೆ ಕಂಡುಬಂದಿದೆ, ಅಂದರೆ ಏಕಾಏಕಿ 14,966 ರಾಸುಗಳ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಒಟ್ಟಾರೆ ಕಳೆದ ನಾಲ್ಕೆ$ದು ವರ್ಷದ ಅವಧಿಯಲ್ಲಿ 46,282 ರಾಸುಗಳ ಸಂಖ್ಯೆ ಕುಸಿತ ಕಂಡಿದೆ.
ಕೈಗಾರೀಕರಣ ಎೆಕ್ಟ್​:
ನೆಲಮಂಗಲ ತಾಲೂಕು ವ್ಯಾಪ್ತಿಯ ದಾಬಸ್​ಪೇಟೆ, ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ, ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ಹಾಗೂ ಹೊಸಕೋಟೆಯ ಕೈಗಾರಿಕಾ ಪ್ರದೇಶಗಳು ದಶಕಗಳಿಂದೀಚಿಗೆ ಸಾಕಷ್ಟು ವಿಸ್ತರಣೆಯಾಗಿದೆ, ಕೆಐಎಡಿಬಿ ಕೈಗಾರಿಕಾ ವಲಯಕ್ಕಾಗಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧಿನಪಡಿಸಿಕೊಂಡಿದೆ. ಇದರಿಂದ ಕೃಷಿ ಜಮೀನುಗಳು ಮಾಯವಾಗುತ್ತಿದ್ದು, ಇವುಗಳನ್ನು ಕೈಗಾರಿಕೆಗಳು ಆವರಿಸಿಕೊಳ್ಳುತ್ತಿವೆ. ಇದರಿಂದ ಹೈನುಗಾರಿಕೆಗೆ ದೊಡ್ಡಪೆಟ್ಟು ಬೀಳುವಂತಾಗಿದೆ, ಇದರ ಜತೆಗೆ ರಾಸುಗಳನ್ನು ಕಾಡುವ ಸಾಂಕ್ರಾಮಿಕ ರೋಗಗಳು, ಪಶು ಆಹಾರ ದರ ಏರಿಕೆ, ಉದ್ಯೋಗ ಅರಸಿ ಪಟ್ಟಣಗಳತ್ತ ಗುಳೆ ಹೊರಟಿರುವುದು ಸೇರಿ ನಾನಾಕಾರಣಗಳಿಂದ ಜಾನುವಾರು ಸಾಕುವವರ ಸಂಖ್ಯೆ ಣಿಸತೊಡಗಿದೆ. ಈ ಹಿಂದಿನ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ 1,87,646 ಜಾನುವಾರುಗಳ ಅಂಕಿ ಸಂಖ್ಯೆ ಲಭ್ಯವಾಗಿತ್ತು. ಪ್ರಸಕ್ತ ಪಶುಪಾಲನಾ ಇಲಾಖೆ ಲಸಿಕಾ ಆಂದೋಲನದಲ್ಲಿ 1.41364 ರಾಸುಗಳ ಅಂಕಿ ಸಂಖ್ಯೆ ದಾಖಲಾಗಿದೆ. ಇದರ ಆಧಾರದ ಮೇಲೆ ಸುಮಾರು 46 ಸಾವಿರ ಜಾನುವಾರುಗಳ ಸಂಖ್ಯೆ ತಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದಿನ ಸಾಲಿನಲ್ಲಿ ಜಾನುವಾರು ಗಣತಿ ನಡೆಯಲಿದ್ದು ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ನಿಖರವಾಗಿ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇವು ಹೊಂದಿಸುವುದೇ ಕಷ್ಟ:
ಮಳೆಯಾಶ್ರಿತ ಬಯಲುಸೀಮೆ ಜಿಲ್ಲೆಯಲ್ಲಿ ಜಾನುವಾರು ಸಾಕಾಣಿಕೆಗೆ ಬೇಕಾದ ಹಸಿಹುಲ್ಲು ಮೇವಿನ ಕೊರತೆ ಸಾಕಷ್ಟು ಬಾಧಿಸುತ್ತಿದೆ. ರಾಗಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ರಾಗಿ ಸಮೃದ್ಧ ಬೆಳೆಯಾದರೆ ಒಣಹುಲ್ಲಿಗೆ ಸಮಸ್ಯೆಯಾಗುವುದಿಲ್ಲ. ಆದರೆ ಮಳೆರಾಯ ಕೈಕೊಟ್ಟು ರಾಗಿ ಸಲಿಗೆ ಪೆಟ್ಟು ಬಿದ್ದರೆ ಅದು ನೇರವಾಗಿ ಹೈನುಗಾರಿಕೆ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಕೊಳವೆಬಾವಿ ಆಶ್ರಯದಲ್ಲಿ ಹಸಿಹುಲ್ಲು ಬೆಳೆಯಲಾಗುತ್ತಿದೆಯಾದರೂ ತೀವ್ರ ಮಳೆಕೊರತೆಯಿಂದ ಅಂತರ್ಜಲ ಕೊರತೆಯಿಂದ ಕೊಳವೆಬಾವಿಗಳಲ್ಲೂ ಅಗತ್ಯ ನೀರು ಸಿಗುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರೊಂದಿಗೆ ಜಾನುವಾರುಗಳನ್ನು ಕಾಡುವ ವಿವಿಧ ಸೋಂಕುಗಳಿಂದಲೂ ಹೈನುಗಾರರು ಹೈರಾಣಾಗಿದ್ದಾರೆ. ಜಿಲ್ಲೆಯಲ್ಲಿ ವೈದ್ಯ ಸಿಬ್ಬಂದಿ ತೀವ್ರ ಕೊರತೆಯೂ ಇದಕ್ಕೆ ಪ್ರಮುಖ ಕಾರಣ ಎಂಬ ಮಾತು ಕೇಳಿಬರುತ್ತಿದೆ.
ಹಾಲು ಉತ್ಪಾದನೆಯಲ್ಲಿ ಸಾಧನೆ:
ರಾಗಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ದಶಕಗಳಿಂದ ಹೈನುಗಾರಿಕೆಯೂ ಮುಂಚೂಣಿಗೆ ಬಂದಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಹೈನೋದ್ಯಮ ನಂಬಿಕೊಂಡಿರುವ ಲಾಂತರ ರೈತರಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜಾನುವಾರು ಸಾಕಣೆಯಿಂದ ರೈತರು ವಿಮುಕ್ತರಾಗುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ. ಆದರೆ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಸರಾಸರಿ ಲೆಕ್ಕದಲ್ಲಿ ಶೇ.3ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಾಲು ಡೇರಿ ಸೇರುತ್ತಿದೆ ಎಂಬ ಅಂಶ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಕಳೆದ ತೆಮಾಸಿಕ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿತ್ತು. ಪಶುಪಾಲನ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಪಶುಪಾಲನಾ ಇಲಾಖೆಯ ಲಸಿಕಾ ಅಭಿಯಾನದಲ್ಲಿ ರಾಸುಗಳ ಸಂಖ್ಯೆ ದಾಖಲಾಗುತ್ತದೆ ಇದರ ಆಧಾರದ ಮೇಲೆ ಸುಮಾರು 40 ಸಾವಿರಷ್ಟು ಜಾನುವಾರುಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ರಾಸುಗಳ ಸಂಖ್ಯೆಯಲ್ಲಿ ಇಳಿಮುಖವಾದರೂ ಜರ್ಮನ್​ ತಳಿಯ ಹಸುಗಳ ಸಾಕಣೆ ಹಾಗೂ ಗುಣಮಟ್ಟದ ಪಶು ಆಹಾರ ಪೂರೈಕೆ ಲವಾಗಿ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ.
> ರವಿಕುಮಾರ್​, ಉಪನಿರ್ದೇಶಕ ಪಶುಪಾಲನಾ ಇಲಾಖೆ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net