ಜನರಲ್ಲಿ ಎಸ್​ಐಆರ್​ ಜಾಗೃತಿ ಮೂಡಿಸಿ

ದೇವನಹಳ್ಳಿ ಮಂಡಲ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಂಡಲ ಅಧ್ಯಕ್ಷ ನೀಲೇರಿ ಎನ್​.ಎಲ್​.ಅಂಬರೀಶಗೌಡ ಮಾತನಾಡಿದರು.  ಬಯಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥ ನಾರಾಯಣ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ನಾಗವೇಣಿ ಶ್ರೀನಿವಾಸ್​,  ಓಬಿಸಿ ತಾಲೂಕು ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಇತರರು ಇದ್ದರು.
ದೇವನಹಳ್ಳಿ ಮಂಡಲ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಂಡಲ ಅಧ್ಯಕ್ಷ ನೀಲೇರಿ ಎನ್​.ಎಲ್​.ಅಂಬರೀಶಗೌಡ ಮಾತನಾಡಿದರು. ಬಯಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥ ನಾರಾಯಣ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ನಾಗವೇಣಿ ಶ್ರೀನಿವಾಸ್​, ಓಬಿಸಿ ತಾಲೂಕು ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜನರಲ್ಲಿ ಎಸ್​ಐಆರ್​ ಜಾಗೃತಿ ಮೂಡಿಸಿ
ದೇವನಹಳ್ಳಿ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಿಎಲ್​ಎ 2 ಮತ್ತು ಬೂತ್​ ಅಧ್ಯಕ್ಷರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಮತದಾರರನ್ನು ಸೇರಿಸುವುದು, ಜಾಗೃತಿ ಮೂಡಿಸಲು ಸಭೆ, ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದು ದೇವನಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ನೀಲೇರಿ ಅಂಬರೀಶ್​ ಗೌಡ ನಿದೆೇರ್ಶನ ನೀಡಿದರು.
ಪಟ್ಟಣದ ದೇವನಹಳ್ಳಿ ಮಂಡಲ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 10 ದಿನಗಳಲ್ಲಿ ಬೂತ್​ ಮಟ್ಟದಲ್ಲಿ ನಡೆಯುವ ಮತದಾರರ ಪಟ್ಟಿ (ಎಸ್​ಐಆರ್​) ಪರಿಷ್ಕರಣೆ ಸಂಬಂಧ ಬೂತ್​ ಮಟ್ಟದ ಅಧ್ಯಕ್ಷರು ಗಮನಹರಿಸಬೇಕು. ಪ್ರತಿ ಬೂತ್​ನಲ್ಲೂ ಪಕ್ಷ ಸಂಟಿಸಬೇಕು. ಒಂದು ಬೂತ್​ನಲ್ಲಿ ಮತ ಹೆಚ್ಚು ಬಂದರೆ ಆ ಬೂತ್​ನ ಶಕ್ತಿ ಹೆಚ್ಚಾಗುತ್ತದೆ. ಪ್ರತಿ ಗ್ರಾಮಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳು, ಕಾಂಗ್ರೆಸ್​ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಭಾಗ ಪ್ರಭಾರಿ ಬ್ಯಾಟೇರಂಗೇಗೌಡ ಮಾತನಾಡಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷ ಸಂಟನೆಗೆ ಆದ್ಯತೆ ನೀಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಬೂತ್​ ಮಟ್ಟದ ಪದಾಧಿಕಾರಿಗಳಿಗೆ ಹೆಚ್ಚಿನ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ನೀಡಬೇಕು ಎಂದರು.
ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ನಾನು ಸಹ 2 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ನಿಮ್ಮ ಬೂತ್​ಗಳಲ್ಲಿ ನೀವು ಕೆಲಸ ಮಾಡಿ. ಇನ್ನು 2 ವರ್ಷ ಚುನಾವಣೆ ಬರುತ್ತದೆ. ಚುನಾವಣೆಗಾಗಿ ನಾವು ಈಗಿನಿಂದಲೇ ಶ್ರಮಿಸಿದರೆ ಪ್ರತಿ ಬೂತ್​ನಲ್ಲೂ ಸಂಟನೆ ಬಲಗೊಳ್ಳು ಸಾಧ್ಯ ಎಂದರು.
ಎಸ್​ ಟಿ ಮೋರ್ಚಾ ಅಧ್ಯಕ್ಷ ಡೈರಿ ನಾಗೇಶ್​ ಬಾಬು, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬುಳ್ಳಹಳ್ಳಿ ರಾಜಪ್ಪ, ಬಿ.ಕೆ.ನಾರಾಯಣಸ್ವಾಮಿ, ಶಿವನಾಪುರ ವಿಜಯ ಕುಮಾರ್​, ಸಿದ್ದಲಿಂಗ ಮೂರ್ತಿ, ಮುನಿಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್​ ಕುಮಾರ್​, ಸುಬ್ರಮಣಿ, ದೇವನಹಳ್ಳಿ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯೆ ವಿಜಯ ರಾವೇಂದ್ರ, ಯುವ ಮೋರ್ಚಾಧ್ಯಕ್ಷ ಮೋಹನ್​, ದೇ.ಸೂ.ನಾಗರಾಜ್​, ಮುಖಂಡ ಬೂದಿಗೆರೆ ಪ್ರಭಾಕರ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net