ಜಿಲ್ಲೆಯಲ್ಲಿ ಈ ಸಾಲಿನ ಬೆಳೆ ಸಮೀಕ್ಷೆ ಆರಂಭಗೊಳ್ಳುತ್ತಿದ್ದು ಸಮೀಕ್ಷೆಯು ಸರಿಯಾದ ಕ್ರಮದಲ್ಲಿ ಆಗಬೇಕಿದೆ. ಹಲವು ಬಾರಿ ಬೆಳೆ ಸಮೀಕ್ಷೆಯಲ್ಲಿ ಕೆಲವೊಂದು ದೋಷಗಳು ಎದುರಾಗುವುದು ಕಂಡುಬರುತ್ತಿದೆ. ಪ್ರತಿ ಬಾರಿ ಬೆಳೆ ಸಮೀಕ್ಷೆ ವೇಳೆ ಕೆಲವೊಂದಷ್ಟು ಗೊಂದಲಗಳು ಏರ್ಪಡುತ್ತವೆ ಇದರಿಂದ ರೈತಾಪಿ ಜನರು ತೊಂದರೆ ಎದುರಿಸುವಂತಾಗುತ್ತಿದೆ ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೆಳೆ ವಿಮೆ ಸಮೀಕ್ಷೆ ನಿಖರವಾಗಿರುವಂತೆ ನೋಡಿಕೊಳ್ಳಬೇಕು ಎಂದು ಎಡಿಸಿ ಸೈಯಿದಾ ಆಯಿಷಾ ಸೂಚನೆ ನೀಡಿದರು. ಬೆಳೆ ಸಮೀಕ್ಷೆ ಮಾಡುವವರಿಗೆ ಸೂಕ್ತ ತರಬೇತಿ ನೀಡಬೇಕು. ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಮೀಕ್ಷೆ ನಡೆಸಿ ನಿಖರ ಅಂಕಿ ಅಂಕಿಅಂಶಗಳ ಕ್ರೂಡಿಕರಣ ಮಾಡಬೇಕು, ಬೆಳೆ ಸಮೀಕ್ಷೆಯಿಂದ ಸೆರೆ ಹಿಡಿಯಲಾದ ದತ್ತಾಂಶವನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕನಿಷ್ಠ ಬೆಂಬಲ, ಸಬ್ಸಿಡಿ ಪಾವತಿ, ಬೆಳೆ ಪ್ರದೇಶದ ಅಂದಾಜು ಕೃಷಿ ಮತ್ತು ತೋಟಗಾರಿಕೆ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಮುಂತಾದ ಸೌಲಭ್ಯ ಒದಗಿಸಲು ಸಹಕಾರಿಯಾಗಲಿದೆ. ಆದ್ದರಿಂದ ಬೆಳೆ ಸಮೀಕ್ಷೆ ನಿಖರವಾಗಿ ಇರಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.