

ನೆಲಮಂಗಲ: ಶ್ರೀಮಂತರೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ರಾಜ್ಯಕ್ಕೆ ಮಾದರಿಯಾಗಿ ನೆಲಮಂಗಲ ತಾಲೂಕು ಆಸ್ಪತ್ರೆ ನಿರ್ಮಾಣಗೊಳ್ಳಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಭರವಸೆ ನೀಡಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಬಳಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆಯನ್ನು ಒಂದೂವರೆ ವರ್ಷದಲ್ಲಿ ನಿರ್ಮಿಸಲು ನಿರ್ದೇಶನ ನೀಡಲಾಗಿದ್ದು, ಈ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ, ವಾಣಿ ವಿಲಾಸ್ ಸೇರಿ ವಿವಿಧ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದರು.
ಸಿಬ್ಬಂದಿ ನೇಮಕ ಶ್ರೀ: ರಾಜ್ಯದ ಶೇ.80 ಜನ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಗುಣಮಟ್ಟದ ಚಿಕಿತ್ಸೆ, ಔಷಧ ನೀಡುವುದು ಸರ್ಕಾರದ ಕರ್ತವ್ಯ. ಸರ್ಕಾರ, ಸಿಎಸ್ಆರ್ ಅನುದಾನದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಗೆ ಸಿಬ್ಬಂದಿಯನ್ನು ನಿಯೋಜಿಸುವ ಕುರಿತು ಮುಖ್ಯಮಂತ್ರಿಗಳ ನೇತೃತದಲ್ಲಿ ಸಭೆ ಕರೆಯಲಾಗಿದ್ದು, ಶ್ರೀದಲ್ಲೇ ವೈದ್ಯರು, ಸಿಬ್ಬಂದಿ ನೇಮಕ ಮಾಡಲಾಗುವುದು. ಕೆಲವೆಡೆ ಶೇ.75 ಔಷಧ ನೀಡಲಾಗಿದ್ದು, ಕೊರತೆ ನೀಗಿಸಲು ಕ್ರಮವಹಿಸಲಾಗುವುದು ಎಂದು ಖಾದರ್ ಹೇಳಿದರು.
ನಗರಸಭೆ ಸದಸ್ಯ ಗಂಗಾಧರ್ರಾವ್, ನರಸಿಂಹಮೂರ್ತಿ, ಸುಧಾಕೃಷ್ಣಪ್ಪ, ಪುರುಷೋತ್ತಮ್, ನೆ.ಯೋ.ಪ್ರಾಧಿಕಾರ ಸದಸ್ಯರಾದ ಗಂಗರಾಜು, ಚಿಕ್ಕಣ್ಣ, ಹನುಮಂತರಾಜು, ಮಾಜಿ ಅದ್ಯಕ್ಷ ಎಂ.ಕೆ.ನಾಗರಾಜು, ಎಂ.ನಾರಾಯಣ್ಗೌಡ, ಮುಖಂಡ ಮಂಜುನಾಥ್, ಸಿ.ಎಂ.ಗೌಡ, ಕೆ.ವಸಂತ್, ಚಿಕ್ಕಣ್ಣ, ಕೇಶವ್, ಪ್ರಕಾಶ್ಬಾಬು, ನಾಗರತ್ನಮ್ಮ, ಹನುಮಂತಮ್ಮ, ವಿಜಯ್ಕುಮಾರ್, ಗಂಗಾಧರ್, ಮುನಿರಾಜು, ಮುನಿರಾಮು, ಕೆಂಪರಾಜು, ಬೂದಿಹಾಳ ವೇಣು, ಲ್ಮನಾರಾಯಣ್, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಆಸ್ಪತ್ರೆ ಸ್ಥಳಾಂತರ: ನೂತನ ಆಸ್ಪತ್ರೆ ಕಾರ್ಯಾರಂಭಿಸುವವರೆಗೂ ಸಾರ್ವಜನಿಕ ಹಿತದೃಷ್ಟಿಯಿಂದ ನಗರದ ಮುಖ್ಯಬಿದಿಯಲ್ಲಿನ ವಿಶ್ವೇಶ್ವರಪುರದ ಟಿಬಿಟಿಯನ್ ವಸತಿ ಸಮುಚ್ಚಯಕ್ಕೆ ತಾಲೂಕು ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಸರ್ಕಾರಿ ಆಸ್ಪತ್ರೆಯ ಕಟ್ಟಡ ಹಾಗೂ ಸುತ್ತಮುತ್ತಲಿನ ಅಭಿವೃದ್ಧಿಯಿಂದ ಹಾಗೂ ಸ್ಥಳಾಂತರಗೊಂಡ ಕಾರಣ ಅಲ್ಲಿನ ಸಿಬ್ಬಂದಿ, ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
350 ನೂತನ ಆಂಬುಲೆನ್ಸ್ ಸೇವೆ: ಆಂಬುಲೆನ್ಸ್ ಸೇವೆ ಮೇಲೆ ನಿಗಾವಹಿಸಲು ತಂತ್ರಜ್ಞಾನ ಬಳಕೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ 350 ನೂತನ ಆಂಬುಲೆನ್ಸ್ಗಳನ್ನು ಶ್ರೀದಲ್ಲೇ ನಿಯೋಜಿಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.
ಮೆಟ್ರೋಗೆ ರಾಜ್ಯ ಸರ್ಕಾರದ ಕೊಡುಗೆ ಹೆಚ್ಚು: ರಾಜ್ಯದಿಂದ ಕೇಂದ್ರಕ್ಕೆ ಅಪಾರ ಜಿಎಸ್ಟಿ ಸಂದಾಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆಯೇ ಮೆಟ್ರೋ ಯೋಜನೆ ಮಾಡಲಾಗಿದೆ. ಆದರೂ ಮೆಟ್ರೋ ಬಿಜೆಪಿ ಯೋಜನೆ ಎಂದು ಹೇಳುವುದು ಸರಿಯಲ್ಲ. ಕೇಂದ್ರ ಸರ್ಕಾರ ಶೇ.10 ಮಾತ್ರ ಅನುದಾನ ನೀಡಿದ್ದು, ಶೇ.90 ರಾಜ್ಯ ಸರ್ಕಾರದು ಎಂದು ಖಾದರ್ ತಿಳಿಸಿದರು.
ಇಲಾಖೆಯ ಮುಂದಿನ ಗುರಿಗಳು: ಆರೋಗ್ಯ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಇಲಾಖೆಯನ್ನು ವಹಿಸಿಕೊಂಡ ಬಳಿಕ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ವಿದ್ಯಾರ್ಥಿ ವೇತನದ ಜತೆಗೆ ಆರ್ಹತೆ ಒಳಪಟ್ಟ 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟ್ಯಾಪ್ ನೀಡುವ ಯೋಜನೆ ಹಾಗೂ ಐಎಎಸ್, ಕೆಎಎಸ್ ಸೇರಿ ಸ್ಪರ್ಧಾತ್ಮಕ ಪರೀೆಗಳ ತರಬೇತಿ ಕೇಂದ್ರ ಸೇರಿದಂತೆ ಹಜ್ ಹಾಗೂ ಮುಬ್ರಾ ಯಾತ್ರೆಯನ್ನು ಕಡಿಮೆ ಬೆಲೆ ಹಾಗೂ ಸುರತಾವಾಗಿ ರೂಪಿಸುವ ಗುರಿಯನ್ನು ಇಲಾಖೆ ಹೊಂದಿದೆ ಎಂದು ಯು.ಟಿ.ಖಾದರ್ ಮಾಹಿತಿ ನೀಡಿದರು.
ಶಾಲೆಗೆ ಶಂಕುಸ್ಥಾಪನೆ: ನೂತನ ಆಸ್ಪತ್ರೆ ಭೂಮಿಪೂಜೆ ಬಳಿಕ ಕಣೇಗೌಡನಹಳ್ಳಿ ಗ್ರಾಮ ಪಂಚಾಯಿತಿಯ ಇಸ್ಲಾಂಪುರದಲ್ಲಿ 5 ಕೋಟಿ ರೂ. ಅನುದಾನದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕೆ ಸಚಿವ ಖಾದರ್ ಶಂಕುಸ್ಥಾಪನೆ ನೆರವೇರಿಸಿದರು.
ಅದ್ದೂರಿ ಸ್ವಾಗತ: ನಗರಕ್ಕೆ ಆಗಮಿಸಿ ಸಚಿವರನ್ನು ಜಾನಪದ ಕಲಾ ತಂಡದೊಂದಿಗೆ ಹಾಗೂ ಸೇಬಿನ ಬೃಹತ್ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇಸ್ಲಾಂಪುರ ಗ್ರಾಮದಲ್ಲಿ ಮುಸ್ಲಿಂ ಮುಖಂಡರು ಬೈಕ್ ರ್ಯಾಲಿ ಮೂಲಕ ಸಚಿವರನ್ನು ಸ್ವಾಗತಿ, ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕ್ಷೇತ್ರದಲ್ಲಿ ಮಾದರಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ನಿರ್ಮಾಣಕ್ಕೆ ಸರ್ಕಾರದಿಂದ ಬೇಕಾದ ಅನುದಾನ, ಆಸ್ಪತ್ರೆ ಗೆ ಬೇಕಾದ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿರುವ ಸಚಿವರಿಗೆ ಧನ್ಯವಾದ. ಆದಷ್ಟು ಬೇಗ ನೂತನ ಆಸ್ಪತ್ರೆ ನಿರ್ಮಿಸಿ ಸೇವೆಗೆ ಒದಗಿಸಲಾಗುವುದು.
> ಶ್ರೀನಿವಾಸ್ ಶಾಸಕ