ದೇವನಹಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ನಮ್ಮದು ಲಿಖಿತ ಸಂವಿಧಾನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಗೂ ಇತರೆ ಮಹಾನ್ ಚೇತನರ ನೆರವಿನಿಂದ ಸುಧೀರ್ಘವಾಗಿ 2 ವರ್ಷ 11 ತಿಂಗಳು 18 ದಿನಗಳ ಪ್ರಯತ್ನದಿಂದ 395 ವಿಧಿಗಳು, 8 ಅನುಸೂಚಿಗಳು, 22 ಭಾಗಗಳನ್ನು ಹೊಂದಿರುವ ಪ್ರಪಂಚದ ಅತೀ ದೊಡ್ಡ ಸಂವಿಧಾನವನ್ನು 1950 ನ. 26 ರಂದು ಸಮರ್ಥಿಸಿಕೊಳ್ಳಲಾಯಿತು.ಪ್ರಸ್ತುತ 467 ವಿಧಿಗಳು, 25 ಭಾಗಗಳು, 12 ಅನುಸೂಚಿಗಳಿವೆ. ಇದರಿಂದ ನಾವೆಲ್ಲರೂ ನಮಗೆ ನೀಡಿರುವ ಹಕ್ಕುಗಳನ್ನು ಬಳಸಿಕೊಂಡು ಸ್ವತಂತ್ರವಾಗಿ ಮಾತನಾಡುತ್ತಿದ್ದೇವೆ ಎಂದರು.