ದಿನವೀಡಿ ಶೀತ ಗಾಳಿ ಹೆಚ್ಚಾಗಿದ್ದು, ಶೀತ, ನೆಗಡಿ, ಕೆಮ್ಮು ಹೆಚ್ಚಾಗುವ ಸಾಧ್ಯತೆ ಇದೆ. ಮಕ್ಕಳು ಹಾಗೂ ಹಿರಿಯ ನಾಗರೀಕರು ಆದಷ್ಟು ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು, ಮುಂಜಾನೆ ಚಳಿ ಹೆಚ್ಚಾಗಿದ್ದು. ಈ ಸಮಯದಲ್ಲಿ ವಾಯುವಿಹಾರ ಮಾಡುವುದು ಸೂಕ್ತವಲ್ಲ ಆದಷ್ಟು ಬಿಸಿನೀರು ಕುಡಿಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.