ಪ್ಲಾಸ್ಟಿಕ್ ಬಂದ ನಂತರ ಮಡಕೆತಯಾರಿಸುವವರು, ಮಾರುವವರು ಕಣ್ಮರೆಯಾಗುತ್ತಿದ್ದಾರೆ, ನಾವು ಕಲಿತ ಕಸಬನ್ನು ಬಿಡಬಾರದು ಎಂದು ಈಗಲೂ ಮಡಕೆ ಮಾಡುತ್ತೆವೆ. ಬೇಸಿಗೆಯಲ್ಲಿ ಮಾತ್ರ ವ್ಯಾಪಾರ ಇರುತ್ತದೆ, ಉಳಿದ ಕಾಲದಲ್ಲಿ ನಮ್ಮತ್ತ ತಿರುಗಿಯೂ ಸಹ ನೋಡುವುದಿಲ್ಲ.ಕುಂಬಾರಿಕೆ ವಂಶಪಾರಂಪರ ವೃತ್ತಿಯಾಗಿದ್ದು, ಇದರಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಾದರೂ ಪರ್ಯಾಯ ವೃತ್ತಿ ತಿಳಿಯದೆ ಕುಂಬಾರಕೆಯನ್ನೇ ಮುಂದುವರೆಸಿಕೊಂಡು ಬಂದಿದ್ದೇವೆ.