ಶಾಸಕ, ವಕೀಲರ ನಡುವೆ ಜಟಾಪಟಿ

Clashes between MLA and lawyer
Clashes between MLA and lawyer
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ತಾಲೂಕಿನ ಜಮೀನು ವ್ಯಾಜ್ಯವೊಂದರ ಸಂಬಂಧ, ಬಿಜೆಪಿ ಶಾಸಕ ಧೀರಜ್ ಮುನಿರಾಜು ಹಾಗೂ ವಕೀಲ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಯಾದವ್ ನಡುವೆ ಶೀತಲ ಸಮರ ನಡೆಯುತ್ತಿದ್ದು, ಆರೋಪ ಪ್ರತ್ಯಾರೋಪಗಳು ಸದ್ದು ಮಾಡುತ್ತಿವೆ.
ಏನಿದು ಪ್ರಕರಣ?
ದಡಟ್ಟಮಡಗು ಗ್ರಾಮದಲ್ಲಿನ 20 ಎಕರೆ ಜಮೀನಿಗೆ ಕಾಂಪೌಂಡ್ ಹಾಕುವ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಯಾದವ್ ಮೇಲೆ ಕೆಲವರು ಹಲ್ಲೆ ವಾಡಿದ ಪ್ರಕರಣ ನಡೆದಿತ್ತು. ಈ ಹಲ್ಲೆಗೆ ಪರೋಕ್ಷವಾಗಿ ಶಾಸಕ ಧೀರಜ್ ಮುನಿರಾಜ್ ಕಾರಣ ಎಂದು ಪ್ರತಾಪ್ ಯಾದವ್ ಸುದ್ದಿಗೋಷ್ಟಿಯಲ್ಲಿ ಗಂಭೀರ ಆರೋಪ ವಾಡಿದ್ದರು. ಈ ಜಮೀನಿಗೂ ನನಗೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ನನ್ನ ಹೆಸರು ಬಳಕೆ ವಾಡಲಾಗಿದೆ. ಜಮೀನು ವ್ಯಾಜ್ಯ ಬಗೆಹರಿಸಲು ಕಂದಾಯ ಇಲಾಖೆ, ಕೋರ್ಟ್ ಇದೆ ಎಂದು ವಕೀಲರ ಆರೋಪವನ್ನು ಶಾಸಕರು ಅಲ್ಲಗೆಳೆದಿದ್ದಾರೆ. ಈ ಪ್ರಕರಣ ತಾಲೂಕಿನಲ್ಲಿ ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗಿದೆ.
ಅಣತಿಯಂತೆ ಹಲ್ಲೆ:
20 ಎಕರೆ ಜಮೀನನ್ನು ಕಾನೂನಾತ್ಮಕವಾಗಿ ಖಾತೆ ವಾಡಿಸಿಕೊಂಡಿದ್ದೇನೆ. ವಾ.29ರಂದು ಜಮೀನಿಗೆ ಕಾಂಪೌಂಡ್ ನಿರ್ಮಿಸುವ ವೇಳೆ ದಡಟ್ಟಮಡಗು ಗ್ರಾಮದ ಒಂದೇ ಕುಟುಂಬದ 19 ಮಂದಿ, ಜತೆಗೆ ಹತ್ತಿರ ಸಂಬಂಧಿಗಳು ವಾರಣಾಂತಿಕ ಹಲ್ಲೆ ವಾಡಿದ್ದಾರೆ. ನನ್ನ ಮೇಲೆ ಹಲ್ಲೆ ವಾಡಿದವರ ಹೆಸರಲ್ಲಿ ಜಮೀನಿನ ಯಾವ ದಾಖಲೆ ಇಲ್ಲ. ಆದರೂ ನಮ್ಮ ಮೇಲೆ ಗಲಾಟೆಗೆ ಬರುತ್ತಿದ್ದರು. ಆಗ ನಾನು ಪೊಲೀಸರಿಗೆ ದೂರು ಕೊಟ್ಟಿದ್ದೆ. ಬಳಿಕ ನಾರಾಯಣಗೌಡ ಮತ್ತು ಅವರ ಕುಟುಂಬದವರು ಶಾಸಕರ ಬಳಿ ಹೋಗಿದ್ದರು. ಆಗ ಶಾಸಕರು ದಾಖಲೆಗಳನ್ನು ಪರಿಶೀಲಿಸಿ ಕಾನೂನಾತ್ಮಕವಾಗಿ ಪ್ರತಾಪ್ ಹೆಸರಲ್ಲಿ ಇದೆ. ಇದನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದರು. ಆದರೆ ಮರ್ಯಾದೆ ಹೋಗುತ್ತದೆ ರಾಜಿ ಸಂಧಾನ ವಾಡಿಸಿ ಎಂದು ಶಾಸಕರಲ್ಲಿ ಗೋಗರೆದಿದ್ದರು. ಆಗ ಶಾಸಕರು ಕಾಂಪೌಂಡ್ ಹಾಕೋದಕ್ಕೆ ಬಿಡಬೇಡಿ ಆಗ ರಾಜಿಗೆ ಬರುತ್ತಾರೆ ಎಂದು ಹೇಳಿ ಕಳುಹಿಸಿದ್ದಾರೆ. ಅವರ ಅಣತಿಯಂತೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಪ್ರತಾಪ್ ಆರೋಪವಾಗಿದೆ. ಶಾಸಕರು ಸ್ಥಳೀಯ ಮುಖಂಡರೊಬ್ಬರಿಗೆ ಕರೆ ವಾಡಿ ಪೊಲೀಸರ ಬಳಿ ವಾತನಾಡುತ್ತಾ. ಪ್ರತಾಪ್ ಮೇಲೆಯೂ ಕೇಸ್ ದಾಖಲಿಸಿಕೊಳ್ಳಿ ಎಂದು ಹೇಳಿದ್ದಾರೆ. ಎಫ್ ಐಆರ್ ನಲ್ಲಿ ಪ್ರತಾಪ್ ಅವರನ್ನು ಎ1 ವಾಡಿ ಅಂತಲೂ ಹೇಳುತ್ತಾರಂತೆ. ಈ ವಿಚಾರ ನನಗೆ ಮೂರನೇ ವ್ಯಕ್ತಿಗಳಿಂದ ತಿಳಿಯಿತು. ನನ್ನ ಮೇಲೆ ಶಾಸಕರಿಗೆ ಏನು ದ್ವೇಷ ಗೊತ್ತಿಲ್ಲ. ಶಾಸಕರಿಗೆ ನಾನು ಯಾವುತ್ತೂ ಏನೂ ಕೇಡು ಬಯಸಿಲ್ಲ. ಆದರೆ, ನನಗೆ ಈ ರೀತಿ ಆಗುವುದಕ್ಕೆ ಪರೋಕ್ಷವಾಗಿ ಸಾಥ್ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ನನಗೂ ಜಮೀನಿಗೂ ಯಾವುದೆ ಸಂಬಂಧವಿಲ್ಲ:
ಸ್ವಪಕ್ಷೀಯ ಪ್ರತಾಪ್ ವಾಡಿರುವ ಎಲ್ಲ ಆರೋಪಗಳನ್ನ ಅಲ್ಲಗೆಳೆದಿರುವ ಶಾಸಕ ಧೀರಜ್ ಮುನಿರಾಜು ನನಗೂ ಈ ಜಮೀನಿಗೂ ಯಾವುದೇ ಸಂಬಂಧವಿಲ್ಲ. ಸರ್ಕಾರಿ ಜಮೀನು ಬಗ್ಗೆ ಇದ್ದರೆ ನಾನು ಕೇಳುತ್ತೇನೆ. ಏನಾದರೂ ಪುರಾವೆಗಳಿದ್ದರೆ ಆರೋಪ ವಾಡಬೇಕು. ಪ್ರತಿನಿತ್ಯ ನಮ್ಮ ಮನೆಗೆ ನೂರಾರು ಜನ ರೈತರು ಬರುತ್ತಾರೆ. ಅವರ ಸಮಸ್ಯೆ ಕೇಳುವುದು ನನ್ನ ಕೆಲಸ. ಜಮೀನು ವ್ಯಾಜ್ಯ ಬಗೆಹರಿಸಲು ನಾನು ಬ್ರೋಕರ್ ಅಲ್ಲ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಿ ಎಂದು ಅಧಿಕಾರಿಗಳಿಗೆ ಹೇಳುವುದು ವಾತ್ರ ನನ್ನ ಕೆಲಸವಾಗಿದೆ ಎಂದು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net