2025-26ನೇ ಸಾಲಿನಲ್ಲಿ ಪೋಷಕತ್ವ ಯೋಜನೆಯಡಿ 8 ಮಕ್ಕಳನ್ನು ಪೋಷಕತ್ವಕ್ಕೆ ನೀಡುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕೇಂದ್ರ ಕಚೇರಿಯಿಂದ ಅಭಿನಂದನಾ ಪತ್ರ ಸ್ವೀಕರಿಸಲಾಗಿದೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಜಿಲ್ಲೆಯಾದ್ಯಂತ 8274 ಶಿಬಿರಾರ್ಥಿಗಳ ಒಳಗೊಂಡು 79 ಅರಿವು ಕಾರ್ಯಕ್ರಮ ಹಾಗೂ 12 ತರಬೇತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಧರ್ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪ್ರಸ್ತುತ 9 ಮಕ್ಕಳು ದತ್ತು ಸಂಸ್ಥೆಯಲ್ಲಿದ್ದು, 5 ಮಕ್ಕಳು ಪಾಲನೆ ಮತ್ತು ಪೋಷಣೆಯಲ್ಲಿದ್ದು, 4 ಮಕ್ಕಳು ದತ್ತು ಪ್ರಕ್ರಿಯೆಯಲ್ಲಿದ್ದಾರೆ. ಇನ್ನೂ ವಿಶೇಷ ಪಾಲನಾ ಯೋಜನೆಯಡಿ ಎಚ್‌ಐವಿ ಸೋಂಕಿತ ಹಾಗೂ ಭಾದಿತ ಮಕ್ಕಳಿಗೆ ಮತ್ತು ಏಡ್ಸ್ ರೋಗದಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪೌಷ್ಠಿಕ ಆಹಾರ, ಶಿಕ್ಷಣ, ಆರೋಗ್ಯಕ್ಕಾಗಿ ಪ್ರತಿ ತಿಂಗಳು 2000 ರೂ. ವಿಶೇಷ ಪಾಲನಾ ಸಹಾಯಧನವಾಗಿ 130 ಮಕ್ಕಳಿಗೆ 31,20,000 ರೂ. ಡಿಬಿಟಿ ಮುಖಾಂತರ ಪಾವತಿಸಲಾಗಿದೆ ಎಂದರು.