ಚಂದಾಪುರ ಕೆರೆ ಅಭಿವೃದ್ಧಿ ಶ್ರೀಘ್ರ

ವಿಜಯವಾಣಿ ವರದಿಗೆ ಶಾಸಕ ಬಿ.ಶಿವಣ್ಣ ಸ್ಪಂದನೆ
 ತ್ಯಾಜ್ಯ ಹಾಗೂ ಕೊಳಚೆ ನೀರಿನಿಂದ ಕಲುಷಿತಗೊಳ್ಳುತ್ತಿರುವ ಚಂದಾಪುರ ಕೆರೆ
ತ್ಯಾಜ್ಯ ಹಾಗೂ ಕೊಳಚೆ ನೀರಿನಿಂದ ಕಲುಷಿತಗೊಳ್ಳುತ್ತಿರುವ ಚಂದಾಪುರ ಕೆರೆ
Published on: 

ಆನೇಕಲ್​ : ಕೈಗಾರಿಕಾ ತ್ಯಾಜ್ಯ ಹಾಗೂ ಕೊಳಚೆ ನೀರಿನಿಂದ ಕಲುಷಿತಗೊಳ್ಳುತ್ತಿರುವ ಚಂದಾಪುರ ಕೆರೆ ಕುರಿತು ವಿಜಯವಾಣಿಯಲ್ಲಿ ಪ್ರಕಟವಾದ ವರದಿಗೆ ಸ್ಪಂದನೆ ದೊರೆತಿದ್ದು, ಕೆರೆ ಅಭಿವೃದ್ಧಿಗೆ ಶಾಸಕ ಬಿ. ಶಿವಣ್ಣ ಶ್ರೀ ಕಾಯಕಲ್ಪ ನೀಡುವುದಾಗಿ ಭರವಸೆ ನೀಡಿದ್ದಾರೆ.

ಚಂದಾಪುರ ಕೆರೆಗೆ ಕಲುಷಿತ ನೀರು ಸೇರುತ್ತಿರುವುದು, ಮಳೆ ಬಂದಾಗ ಕೆರೆ ಕೋಡಿ ಬಳಿ ಬಿಳಿ ನೊರೆ ಕಾಣಿಸಿಕೊಳ್ಳುತ್ತಿರುವುದು, ದುರ್ನಾತದ ಹಾಗೂ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ನಡುವೆಯೂ ಮಾಲಿನ್ಯಕ್ಕೆ ತಡೆ ಇಲ್ಲದಿರುವುದರ ಬಗ್ಗೆ ಸೆ.24ರಂದು "ಚಂದಾಪುರ ಕೆರೆ ಒಡಲು ಸೇರುತ್ತಿದೆ ರಾಸಾಯನಿಕ' ಶೀರ್ಷಿಕೆಯಡಿ ವಿಸತ ವರದಿ ಪ್ರಕಟಿಸಲಾಗಿತ್ತು. ವರದಿ ಬೆನ್ನಲ್ಲೆ ಕೆರೆ ಅಭಿವೃದ್ಧಿ ವಿಚಾರ ಮುನ್ನೆಲೆಗೆ ಬಂದಿದೆ. ಕೆರೆಯ ಪ್ರಸ್ತುತ ಸ್ಥಿತಿ, ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನುದಾನ ಲಭ್ಯತೆ ಕುರಿತು ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದು, ಶ್ರೀದಲ್ಲೇ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಶಾಸಕರು ತಿಳಿಸಿದ್ದಾರೆ.

ಚಂದಾಪುರ ಕೆರೆ ಅಭಿವೃದ್ಧಿ ವಿಚಾರವಾಗಿ ಶಾಸಕರ ಕಚೇರಿಯಿಂದ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆದಿದೆ. 2026ರ ಜನವರಿ 29ರಂದು ತಾಲೂಕು ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಸಲ್ಲಿಸಲಾಗಿದ್ದು, ಚಂದಾಪುರ ಸೇರಿ ವಿವಿಧ ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ. ಅದರಲ್ಲಿ ಒಟ್ಟು 28 ಲ ರೂ. ಅಂದಾಜು ಮೊತ್ತದ ವಿವಿಧ ಕಾಮಗಾರಿಗಳ ಪ್ರಸ್ತಾವನೆ ಇದೆ. ಇದರ ಬೆನ್ನಲ್ಲೇ ಮೇ 2ರಂದು ತಾಲೂಕು ಯೋಜನಾ ಪ್ರಾಧಿಕಾರದಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನೆಯಾಗಿದ್ದು, ಚಂದಾಪುರ ಕೆರೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆಗೆ ಮನವಿ ಮಾಡಲಾಗಿದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಡಿ ಸಂಗ್ರಹವಾಗುವ ಶುಲ್ಕವನ್ನು ಸ್ಥಳಿಯ ಯೋಜನಾ ಪ್ರದೇಶದಲ್ಲಿರುವ ಜಲಮೂಲಗಳ ಅಭಿವೃದ್ಧಿ ಹಾಗೂ ಪುನಶ್ಚೇತನಕ್ಕೆ ಬಳಸಲು ಜಿಲ್ಲಾಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಚಂದಾಪುರ ಕೆರೆ ಅಭಿವೃದ್ಧಿಗೆ ವಿಜಯವಾಣಿ ವರದಿ ಬೆನ್ನಲ್ಲೆ ಶಾಸಕ ಬಿ.ಶಿವಣ್ಣ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಕೆರೆಗೆ ಹೊಸ ರೂಪ ಸಿಗುವ ನಿರೀೆ ಮೂಡಿಸಿದೆ. ಈಗಾಗಲೇ ಕೆರೆ ಅಭಿವೃದ್ಧಿಗೆ ಹಲವು ರೂಪುರೇಷೆಗಳನ್ನು ಶಾಸಕರ ಮುಂದೆ ತಂದಿದ್ದು, ವರದಿಯು ಮತ್ತಷ್ಟು ಪುಷ್ಟಿ ನೀಡಿದೆ.
> ಮುನಿತಿಮ್ಮಾರೆಡ್ಡಿ ಯುವ ಕಾಂಗ್ರೆಸ್​ ಮುಖಂಡ, ಚಂದಾಪುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net