"ಮನೆಗಳ್ಳನ ಬಂಧನ' ಚಿನ್ನಾಭರಣ, ನಗದು ವಶ

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಡಾ.ಎಂ.ಬಿ.ನವೀನ್​ ಕುಮಾರ್​ ನೇತೃತ್ವದ ತಂಡ ಮನೆಗಳವು ಆರೋಪಿಯನ್ನು ಬಂಧಿಸಿರುವುದು. ಪಿಎಸ್​ಐಗಳಾದ ನಾರಾಯಣಸ್ವಾಮಿ, ಚಂದ್ರಕಲಾ, ಪ್ರೊಬೇಷನರಿ ಪಿಎಸ್​ಐಗಳಾದ ವಿನಾಯಕ ಪಾಟೀಲ್​, ನಾಗರಾಜು, ಎಎಸ್​ಐ ರಾಧಾಕೃಷ್ಣ ಹಾಗೂ ಸಿಬ್ಬಂದಿ ಇದ್ದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಡಾ.ಎಂ.ಬಿ.ನವೀನ್​ ಕುಮಾರ್​ ನೇತೃತ್ವದ ತಂಡ ಮನೆಗಳವು ಆರೋಪಿಯನ್ನು ಬಂಧಿಸಿರುವುದು. ಪಿಎಸ್​ಐಗಳಾದ ನಾರಾಯಣಸ್ವಾಮಿ, ಚಂದ್ರಕಲಾ, ಪ್ರೊಬೇಷನರಿ ಪಿಎಸ್​ಐಗಳಾದ ವಿನಾಯಕ ಪಾಟೀಲ್​, ನಾಗರಾಜು, ಎಎಸ್​ಐ ರಾಧಾಕೃಷ್ಣ ಹಾಗೂ ಸಿಬ್ಬಂದಿ ಇದ್ದರು.
Published on: 

ದೊಡ್ಡಬಳ್ಳಾಪುರ : ಮನೆ ಕಳವು ಆರೋಪಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿ, 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಭದ್ರಪ್ಪ ಬಸಪ್ಪ ಹಡಪದ (30) ಬಂಧಿತ. ಸೆ.27ರಂದು ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮದ ಮನೆಯೊಂದರಲ್ಲಿ 163 ಗ್ರಾಂ ಚಿನ್ನಾಭರಣ ಹಾಗೂ ನಗದು ಕಳವಾದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂದು ಗ್ರಾಮಾಂತರ ಜಿಲ್ಲಾ ಪೊಲೀಸ್​ ಅಧೀಕ್ಷಕ ಎಂ.ವಿ.ಚಂದ್ರಕಾಂತ್​,ಹೆಚ್ಚುವರಿ ಪೊಲೀಸ್​ ಅಧೀಕ್ಷಕರಾದ ಡಾ. ವೆಂಕಟೇಶ್​ ಪ್ರಸನ್ನ, ಎ.ವಿ.ಲಕ್ಷ್ಮೀನಾರಾಯಣಹಾಗೂ ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್​ಪಿ ಪಾಂಡುರಂಗ ಮಾರ್ಗದರ್ಶನದಲ್ಲಿ ಇನ್​ಸ್ಪೆಕ್ಟರ್​ ಡಾ.ಎಂ.ಬಿ.ನವೀನ್​ ಕುಮಾರ್​ನೇತೃತ್ವದ ವಿಶೇಷ ತಂಡ ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಇತರ ತಾಂತ್ರಿಕ ಸಾಕ್ಷ$್ಯ ಆಧರಿಸಿ 24 ಗಂಟೆ ಒಳಗೆ ಆರೋಪಿಯನ್ನು ಬಂಧಿಸಿ ಪ್ರಕರಣ ಭೇದಿಸಿದೆ.

ಏನೇನು ವಶ? : ಬಂಧಿತನಿಂದ 45 ಗ್ರಾಂ ತೂಕದ ಎರಡು ಎಳೆ ಅವಲಕ್ಕಿ ಸರ, 62 ಗ್ರಾಂನ ಮಾಂಗಲ್ಯ ಸರ, 55 ಗ್ರಾಂನ ನಾಲ್ಕು ಚಿನ್ನದ ಬಳೆಗಳು ಸೇರಿ ಒಟ್ಟು 163 ಗ್ರಾಂ ಚಿನ್ನಾಭರಣ ಹಾಗೂ25 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತನನ್ನು ಕೊಂದವನ ಬಂಧನ

ಆನೇಕಲ್​ : ಸ್ನೇಹಿತನನ್ನು ದೊಣ್ಣೆಯಿಂದ ಹೊಡೆದು ಕೊಲೆಮಾಡಿದವನನ್ನು ಸೂರ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಸರೋಡ್​ ನಿವಾಸಿ, ಆಟೋ ಚಾಲಕ ಸಂತೋಷ್​ (32) ಬಂಧಿತ. ಕರ್ಪೂರು ಗ್ರಾಮದ ಸುಭಾಷ್​(32) ಹಾಗೂ ಸಂತೋಷ ಸ್ನೇಹಿತರಾಗಿದ್ದು, ಇಬ್ಬರೂ ಆಗಾಗ ಮದ್ಯ ಸೇವಿಸಲು ಜತೆಯಾಗುತ್ತಿದ್ದರು. ಸೆ.22ರಂದು ರಾತ್ರಿ 1.30ರ ಸುಮಾರಿಗೆ ಮದ್ಯ ಸೇವಿಸಲು ರಾಮಕೃಷ್ಣಪುರ ರಸ್ತೆಗೆ ಇಬ್ಬರೂ ಹೋಗಿದ್ದರು.

ಆಟೋದಲ್ಲೇ ಇಬ್ಬರೂ ಮದ್ಯಪಾನ ಮಾಡಿದ್ದು, ನಶೆ ಏರುತ್ತಿದ್ದಂತೆ ಇಬ್ಬರು ನಡುವೆ ವಾಗ್ವಾದ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಅವಾಚ್ಯವಾಗಿ ನಿಂದಿಸಿಕೊಂಡಿದ್ದಾರೆ. ಈ ವೇಳೆ ಆಕ್ರೋಶಗೊಂಡ ಸಂತೋಷ್​ ಆಟೋದಲ್ಲಿದ್ದ ದೊಣ್ಣೆಯಿಂದ ಸುಭಾಷ್​ ತಲೆಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಸುಭಾಷ್​ ರಸ್ತೆ ಬದಿಯ ಪೊದೆಯೊಳಗೆ ಬಿದ್ದು ಮೃತಪಟ್ಟಿದ್ದಾನೆ. ಕೊಲೆಗೆ ಬಳಸಿದ್ದ ದೊಣ್ಣೆಯನ್ನು ಮೃತದೇಹದ ಸಮೀಪದಲ್ಲೇ ಎಸೆದು, ಆಟೋ ಸಮೇತ ಸ್ಥಳದಿಂದ ಪರಾರಿಯಾಗಿದ್ದಾಗಿ ವಿಚಾರಣೆೆ ವೇಳೆ ಸಂತೋಷ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net