ಪ್ರಮುಖ ಕೈಗಾರಿಕಾ ಪ್ರದೇಶವೆಂದು ಗುರುತಿಸಿಕೊಂಡಿರುವ ಸೋಂಪುರ ಹೋಬಳಿ ಪ್ರಮುಖ ಪ್ರವಾಸೋದ್ಯಮ ಕ್ಷೇತ್ರವಾಗಿಯೂ ಗುರುತಿಸಿಕೊಂಡಿದೆ, ಸೋಂಪುರದಲ್ಲಿ ದಕ್ಷಿಣ ಕಾಶಿ ಶಿವಗಂಗೆ, ಅಗಳಕುಪ್ಪೆಯ ಶ್ರೀ ಸಿದ್ದರಬೆಟ್ಟ, ಹೇಗ್ಗುಂದದ ಶ್ರೀರಾಮ ಬೆಟ್ಟ, ಕೆಂಗಲ್ ಬೆಟ್ಟ ಹಾಗೂ ನರಸೀಪುರ ಶ್ರೀರಾಮನ ಬೆಟ್ಟಗಳಿಂದ ಪ್ರಮುಖ ಯಾತ್ರಾಕ್ಷೇತ್ರವಾಗಿ ಗಮನ ಸೆಳೆದಿದೆ. ಸರ್ಕಾರ ಕೈಗಾರಿಕಾ ವಲಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಬಹುದು ಎಂಬ ನಿರೀಕ್ಷೆ ಇದೆ.