ಹೆಚ್ಚು ಸೋಡಿಯಂ ಸೇವಿಸುವುದರಿಂದ ದೇಹದಲ್ಲಿ ನೀರು ಸಂಗ್ರಹವಾಗುತ್ತದೆ. ಇದು ರಕ್ತನಾಳಗಳ ಮೇಲೆ ಒತ್ತಡವನ್ನು ಬೀರುತ್ತದೆ.ಇದು ಅನೇಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದು ವೈದ್ಯಾಧಿಕಾರಿಗಳ ಅಭಿಮತವಾಗಿದೆ. ಇದರೊಂದಿಗೆ ಇಂದಿನ ಯುವಜನರ ಆಧುನಿಕ ಜೀವನ ಶೈಲಿ, ವ್ಯಾಯಮ ರಹಿತ ಜೀವನ, ಮದ್ಯಪಾನ, ಧೂಮಪಾನದಂತ ದುಶ್ಚಟಗಳು, ಅರೋಗ್ಯದ ನಿರ್ಲಕ್ಷ್ಯ ಧೋರಣೆ, ಆರಂಭಿಕ ರೋಗ ಲಕ್ಷಣದ ಬಗ್ಗೆ ನಿಗಾ ವಹಿಸದಿರುವುದು ಇಂಥ ರೋಗಗಳಿಗೆ ಬಾಧಿತರಾಗುವಂತಾಗುತ್ತಿದೆ ಎಂಬುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ.