ಮುತ್ಕೂರು ಕೋಳಿ ಸಾಕಣೆ ಕೇಂದ್ರ ಗ್ರಾಮಗಳಿಂದ ಸುಮಾರು 1 ಕಿ.ಮೀ ಅಂತರವಿದ್ದು ಸೋಂಕು ಎಲ್ಲಿಯೂ ಹರಡಿಲ್ಲ. ಅದೇ ರೀತಿ ಕೋಳಿ ಸಾಕಣೆ ಕೇಂದ್ರದಿಂದ 1 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿನ 35 ಗ್ರಾಮಗಳನ್ನು ಗುರುತಿಸಲಾಗಿದ್ದು, ಆ ಗ್ರಾಮಗಳಲ್ಲಿನ ಕೋಳಿ ಸಾಕಣೆ ಕೇಂದ್ರಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ರ‌್ಯಾಂಡಮ್ ತಪಾಸಣೆ ನಡೆಸಲಾಗುವುದು, ಅಲ್ಲಿ ಮಾದರಿಯನ್ನು ತೆಗೆದುಕೊಂಡು ಭೂಪಾಲ್ ಲ್ಯಾಬ್‌ಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ರವಾನೆಯಾಗಿದ್ದು ಆಯಾ ಜಿಲ್ಲೆಗಳ ಪಶುಪಾಲನ ಇಲಾಖೆ ಅಲರ್ಟ್ ಆಗಿರುವಂತೆ ತಿಳಿಸಲಾಗಿದೆ. ಇದುವರೆಗೆ ಬೇರೆಲ್ಲೂ ಸೋಂಕು ಕಾಣಿಸಿಕೊಂಡಿಲ್ಲ. ಇದರಿಂದ ಈ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಇಲಾಖೆ ಮನವಿ ಮಾಡಿದೆ.