ಭೂಸ್ವಾಧೀನ ವಿರೋಧಿಸಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯಲ್ಲಿ ಕೆಆರ್ಎಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ದೇವರಾಜ್, ಮೇಜರ್ ರಾಘುರಾಮ್ ರೆಡ್ಡಿ, ನಾಗೇಶ್, ಬಿಕ್ಕನಹಳ್ಳಿ ಅಶೋಕ್ ರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಆನೇಕಲ್ ತಾಲೂಕು ಅಧ್ಯಕ್ಷ ವಿಜಯರೆಡ್ಡಿ, ಉಪಾಧ್ಯಕ್ಷ ಹರೀಶ್ ಕುಮಾರ್, ಮಹೇಶ್ ರೆಡ್ಡಿ, ವಸುಂಧರ ರೆಡ್ಡಿ ಇತರರು ಇದ್ದರು.
ಸರ್ಜಾಪುರ:ಭೂಸ್ವಾಧೀನ ವಿರೋಧಿಸಿ ಹೋರಾಟ ನಡೆಸುತ್ತಿರುವ ಸರ್ಜಾಪುರ ಹೋಬಳಿ ವ್ಯಾಪ್ತಿಯ 11 ಗ್ರಾಮಗಳ ರೈತರಿಗೆ ಬೆಂಬಲ ಸೂಚಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಂಸ್ಥಾಪಕ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.
ದೊಮ್ಮಸಂದ್ರದಿಂದ ಆರಂಭಗೊಂಡ ರ್ಯಾಲಿ ಕೊಮ್ಮಸಂದ್ರ, ಬಿ.ಹೊಸಹಳ್ಳಿ, ಗೋಪಸಂದ್ರ, ಸೋಂಪುರ, ಸರ್ಜಾಪುರ, ಬಿದರಗುಪ್ಪೆ, ಅರೇನೂರು, ಹಂದೇನಹಳ್ಳಿ, ಸೊಳ್ಳೆಪುರ, ಸಮ್ಮನಹಳ್ಳಿ ಮಾರ್ಗವಾಗಿ ಮುತ್ತಾನಲ್ಲೂರು ತಲುಪಿತು. ಈ ವೇಳೆ ರೈತರು, ಮಹಿಳೆಯರು ಹಾಗೂ ಪಕ್ಷದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ರವಿ ಕೃಷ್ಣಾರೆಡ್ಡಿ ಮಾತನಾಡಿ, ಆನೇಕಲ್ ತಾಲೂಕಿನಲ್ಲಿ ಈಗಾಗಲೇ ಸಾವಿರಾರು ಎಕರೆ ಭೂಮಿ ಸ್ವಾಧಿನಪಡಿಸಿಕೊಂಡಿದ್ದರೂ ಆ ಪ್ರದೇಶವನ್ನು ಅಭಿವೃದ್ಧಿಪಡಿಸದೆ ಹಾಗೇಬಿಟ್ಟು, ಇದೀಗ ಮತ್ತೇ ಕೃಷಿ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ. ರೈತರನ್ನು ಒಕ್ಕಲೆಬ್ಬಿಸಿ ಬಂಡವಾಳಶಾಹಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಪರವಾಗಿ ಭೂಮಿ ಬಳಸುವ ಪ್ರಯತ್ನ ನಡೆಯುತ್ತಿದ್ದು, ರೈತರ ಹೋರಾಟವನ್ನು ಹತ್ತಿಕ್ಕಲು ಪೊಲೀಸರನ್ನು ಬಳಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿ ದೇವರಾಜ್, ಮೇಜರ್ ರಾಘುರಾಮ್ ರೆಡ್ಡಿ, ನಾಗೇಶ್, ಬಿಕ್ಕನಹಳ್ಳಿ ಅಶೋಕ್ ರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಆನೇಕಲ್ ತಾಲೂಕು ಅಧ್ಯಕ್ಷ ವಿಜಯರೆಡ್ಡಿ, ಉಪಾಧ್ಯಕ್ಷ ಹರೀಶ್ ಕುಮಾರ್, ಮಹೇಶ್ ರೆಡ್ಡಿ, ವಸುಂಧರ ರೆಡ್ಡಿ ಇತರರು ಇದ್ದರು.
ಸರ್ಜಾಪುರ ವ್ಯಾಪ್ತಿಯ ರೈತರ ಹೋರಾಟ ನ್ಯಾಯಸಮ್ಮತವಾಗಿದ್ದು, ಯಾವುದೇ ಕಾರಣಕ್ಕೂ ಭೂಮಿಯನ್ನು ಬಲವಂತವಾಗಿ ಸ್ವಾಧಿನಪಡಿಸಿಕೊಳ್ಳಲು ಬೀಡುವುದಿಲ್ಲ. ಆದೇಶ ಹಿಂಪಡೆಯುವವರೆಗೆ ಹೋರಾಟ ಮುಂದುವರಿಯಲಿದ್ದು, ರೈತರ ಹಕ್ಕುಗಳ ರಕ್ಷಣೆಗಾಗಿ ಎಲ್ಲ ಸಂಘ&ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಹೋರಾಟ ನಡೆಸಲಾಗುವುದು.
- ಡಾ.ಚಿನ್ನಪ್ಪ ವೈ. ಚಿಕ್ಕಹಾಗಡೆ. ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿ ಸಂಚಾಲಕ