ಭಗತ್​ಸಿಂಗ್​ ಅಪ್ಪಟ ದೇಶಪ್ರೇಮಿ

ನೆಲಮಂಗಲ ತಾಲೂಕು ಕಚೇರಿ ಮುಂದೆ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​  ಜನ್ಮದಿನಾಚರಣೆಯಲ್ಲಿ ಕೆಆರ್​ಎಸ್​ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಎಲ್​.ಜೀವನ್​, ಸಂಘಟನಾ ಕಾರ್ಯದರ್ಶಿ ರಘುನಂದನ ಇತರರು ಇದ್ದರು.
ನೆಲಮಂಗಲ ತಾಲೂಕು ಕಚೇರಿ ಮುಂದೆ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​ ಜನ್ಮದಿನಾಚರಣೆಯಲ್ಲಿ ಕೆಆರ್​ಎಸ್​ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಎಲ್​.ಜೀವನ್​, ಸಂಘಟನಾ ಕಾರ್ಯದರ್ಶಿ ರಘುನಂದನ ಇತರರು ಇದ್ದರು.
Published on: 

ನೆಲಮಂಗಲ : ಭಗತ್​ ಸಿಂಗ್​ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ಅಪಾರ ಧೈರ್ಯ ಮತ್ತು ದೇಶಪ್ರೇಮವನ್ನು ಪ್ರದರ್ಶಿಸಿದ ಕ್ರಾಂತಿಕಾರಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದರು.

ತಾಲೂಕು ಕಚೇರಿ ಮುಂದೆ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಜಲಿಯನ್​ ವಾಲಾಬಾಗ್​ ಹತ್ಯಾಕಾಂಡದಂತಹ ಬ್ರಿಟಿಷರ ದೌರ್ಜನ್ಯಗಳು ಅವರ ಮೇಲೆ ಬೀರಿದ ಪರಿಣಾಮ, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅವರು ವಹಿಸಿದ ಪಾತ್ರ ಅತ್ಯಂತ ಮುಖ್ಯ. ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಸಂದರ್ಭದಲ್ಲಿಯೂ ಯಾವುದೇ ರೀತಿಯ ಹಿಂಜರಿಕೆ ತೋರದೆ, ಆದರ್ಶ ಮತ್ತು ನಂಬಿಕೆಗಳಿಗಾಗಿ ಧೈರ್ಯದಿಂದ ಮರಣ ಎದುರಿಸಿದ ಭಗತ್​ಸಿಂಗ್​ ಬದುಕು ಯುವಜನರಿಗೆ ಪ್ರೇರಣೆ ಎಂದರು.

ಇಂದಿನ ಯುವಜನರು ಭಗತ್​ಸಿಂಗ್​ ಅವರ ದೇಶಪ್ರೇಮ, ಧೈರ್ಯ ಮತ್ತು ಸಾಮಾಜಿಕ ಬದ್ಧತೆಯನ್ನು ಸ್ಫೂರ್ತಿಯಾಗಿಸಿಕೊಂಡು ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮ, ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ಧ್ವನಿ ಎತ್ತಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಭಗತ್​ ಸಿಂಗ್​ ಅಭಿಮಾನಿಗಳಿಂದ ಅನ್ನಸಂತರ್ಪಣೆ ಹಾಗೂ ಕಬ್ಬಿನ ಹಾಲು ವಿತರಿಸಲಾಯಿತು. ಕಾರ್ಯಕ್ರಮದಲ್ಲಿವೆಂಕಟೇಶ್​, ಜೈರಾಮಗೌಡ, ಗಣೇಶ್​, ಲಕ್ಷಿ$್ಮನಾರಾಯಣ ಹಾಗೂ ಭಗತ್​ ಸಿಂಗ್​ ಅಭಿಮಾನಿಗಳು ಇದ್ದರು.

ಕಾರ್ಯಕ್ರಮದಲ್ಲಿ ಕೆಆರ್​ಎಸ್​ ಪಕ್ಷದ ರಾಜ್ಯ ಯುವ ಘಟಕದ ಕಾರ್ಯದರ್ಶಿ ವೆಂಕಟೇಶ್​, ಎಸ್ಸಿ, ಎಸ್ಟಿ ಘಟಕದ ಕಾರ್ಯದರ್ಶಿ ಹನುಸ್ವಾಮಿ, ರೈತ ಘಟಕದ ಕಾರ್ಯದರ್ಶಿ ವಿಶ್ವನಾಥ್​, ಬೆಂ. ಗ್ರಾಮಾಂತರ ಜಿಲ್ಲಾಧ್ಯಕ್ಷ ಶಶಿಕುಮಾರ್​, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net