ಆಯಾ ಕ್ಷೇತ್ರದಲ್ಲಿ ಆಯಾ ಶಾಸಕರೇ ಇವೆಲ್ಲದರ ಜವಾಬ್ದಾರಿ ಹೊರಬೇಕು ಇಂಥ ಪ್ಲೆಕ್ಸ್ ಬ್ಯಾನರ್‌ಗಳಿಗೆ ಕಡಿವಾಣ ಹಾಕಬೇಕು. ಅಧಿಕಾರಿಗಳಿಗೆ ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಆದರೆ ಇದೆಲ್ಲ ತದ್ವಿರುದ್ಧವಾಗುತ್ತಿವೆ. ಶಾಸಕರ ಹುಟ್ಟುಹಬ್ಬ, ಕಾಮಗಾರಿಗಳ ಉದ್ಘಾಟನೆ, ಗುದ್ದಲಿಪೂಜೆ ವೇಳೆಯಲ್ಲಿ ಅವರ ಬೆಂಬಲಿಗರೆ ಎಲ್ಲೆಂದರಲ್ಲಿ ಪೋಸ್ಟರ್‌ಗಳನ್ನು, ಬ್ಯಾನರ್‌ಗಳನ್ನು ತೂಗಿ ಹಾಕುತ್ತಾರೆ. ಈ ಬಗ್ಗೆ ಶಾಸಕರು ಜಾಣಕುರುಡು ಪ್ರದರ್ಶಿಸುವುದು ಕಂಡುಬರುತ್ತಿದೆ. ಇದರಿಂದ ಇದಕ್ಕೆ ಕಡಿವಾಣ ಹಾಕಬೇಕಾದ ಜನಪ್ರತಿನಿಧಿಗಳೇ ಪರೋಕ್ಷವಾಗಿ ಬೆಂಬಲ ನೀಡುವುದರಿಂದ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳದೆ ಬೇರೆ ದಾರಿ ಇಲ್ಲ ಎಂಬಂತಾಗಿದೆ.