

ಶಿವರಾಜ ಎಂ.ಬೆಂಗಳೂರು
ವಾಹನ ಸ್ಟಾರ್ಟ್ ಆದಾಗಿನಿಂದ ಚಲಿಸುವ ವೇಳೆಯಲ್ಲೂ ಸಣ್ಣ ಸದ್ದೂ ಮಾಡದೆ ಬಹಳ ನಾಜೂಕಾಗಿ ಸಾಗುವ ವಾಹನ ಇದಾಗಿದ್ದು, ಲಕ್ಸುರಿ ಕಾರೊಂದರಲ್ಲಿ ಪ್ರಯಾಣಿಸುವಂತ ಫೀಲ್ ಕೊಡುತ್ತದೆ, ವಾಹನದ ಹೆಡ್‌ಲೈಟ್, ಸ್ಪೀಡೋಮೀಟರ್, ಆಕರ್ಷಕ ಮಿರರ್‌ಗಳು, ಹ್ಯಾಂಡಲ್, ಪುಟ್‌ರೆಸ್ಟ್ ಸೇರಿ ಎಲ್ಲವೂ ವಿಶೇಷ ಎನಿಸಿತ್ತದೆ. ನೋಡಿದ ಕೂಡಲೇ ಒಂದು ರೌಂಡ್ ಹಾಕಲೇಬೇಕು ಎಂಬ ತುಡಿತ ಮೂಡಿಸುವಂತ ರೂಪ ಬಜಾಜ್ ಚೇತಕ್‌ನದ್ದಾಗಿದೆ.
ಇತ್ತೀಚಿನ ದುಬಾರಿ ಇವಿ ವಾಹನಗಳ ನಡುವೆ ಮಧ್ಯಮವರ್ಗದ ಗ್ರಾಹಕರಿಗಾಗಿಯೇ ರೂಪಿಸಿದಂತಿರುವ ಕೈಗೆಟಕುವ ದರದಲ್ಲಿ ಬಜಾಜ್ ಚೇತಕ್ ಇ-25 ಎಲೆಕ್ಟ್ರಿಕಲ್ ವಾಹನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 2.5ಕಿ ವ್ಯಾ. ಬ್ಯಾಟರಿ ಪ್ಯಾಕಪ್, 113 ಕಿ.ಮೀ.ನಷ್ಟು ಚಲಿಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 55 ಕಿ.ಮೀ. ಗರಿಷ್ಠ ವೇಗ ಮತ್ತು ಹಗುರವಾದ ಸಂಪೂರ್ಣ ಲೋಹದ ಬಾಡಿಯನ್ನು ಹೊಂದಿದೆ.
ಬ್ಯಾಟರಿ ಸಾಮರ್ಥ್ಯ: 2.5 ಕಿ.ವ್ಯಾಟ್, ಚಾಲನಾ ವ್ಯಾಪ್ತಿ: ಪ್ರತಿ ಚಾರ್ಜ್‌ಗೆ 113 ಕಿ.ಮೀ, ಗರಿಷ್ಠ ವೇಗ ಗಂಟೆಗೆ 55 ಕಿ.ಮೀ, ಮೋಟಾರ್ ಶಕ್ತಿ: 2.2 ಕಿ.ವ್ಯಾ. (ಗರಿಷ್ಠ ಶಕ್ತಿ); ಚಾರ್ಜಿಂಗ್ ಸಮಯ ಸುಮಾರು 2 ಗಂಟೆ 25 ನಿಮಿಷ. ತೂಕ: 107 ಕೆಜಿ, ಬೂಟ್ ಸ್ಪೇಸ್ 25 ಲೀಟರ್‌ಗಳು. ಸ್ಟ್ಯಾಂಡರ್ಡ್ ರಿವರ್ಸ್ ಮೋಡ್‌ನೊಂದಿಗೆ ಕಲರ್ ಎಲ್‌ಸಿಡಿ ಕನ್ಸೋಲ್ ಹೆಚ್ಚುವರಿ ರೈಡ್ ಮೋಡ್‌ಗಳಿಗಾಗಿ ಐಚ್ಛಿಕ ಟೆಕ್‌ಪ್ಯಾಕ್, ಹಿಲ್ ಹೋಲ್ಡ್ ಮತ್ತು ಮ್ಯೂಸಿಕ್ ಕಂಟ್ರೋಲ್, ಡಿಸ್ಕ್‌ಬ್ರೇಕ್ ಮತ್ತು ರಿಯರ್ ಡ್ರಮ್ ಬ್ರೇಕ್ ಪ್ರಮುಖ ಆಕರ್ಷಣೆಗಳಾಗಿವೆ.
ಎಲ್ಲ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ವಾಹನ ತಯಾರಿಸಲಾಗಿದ್ದರೂ ಯುವತಿಯರಿಗೆ ಬಜಾಜ್ ಚೇತಕ್ ಅಚ್ಚುಮೆಚ್ಚು ಎನಿಸಿದೆ. ಅದರಲ್ಲೂ ಕಾಲೇಜು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ವಾಹನದ ಖರೀದಿಗೆ ಮುಗಿಬೀಳುತ್ತಿದ್ದಾರೆ. ಇದರೊಂದಿಗೆ ಗೃಹಿಣಿಯರಿಗೆ ೇವರೇಟ್ ಎನಿಸಿದೆ. ಮನೆಯ ಸುತ್ತಮುತ್ತ ಓಡಾಡಲು, ಮಕ್ಕಳನ್ನು ಶಾಲೆಗಳಿಗೆ ಬಿಟ್ಟು ಬರಲು, ಶಾಫಿಂಗ್‌ಗೆ ಹೇಳಿ ಮಾಡಿಸಿದಂತಾ ವಾಹನವಾಗಿದೆ.