ಸೂಲಿಬೆಲೆಯಲ್ಲಿ ಆರೋಪಿ ಶೆಡ್‌ವೊಂದನ್ನು ನಿರ್ಮಿಸಿ ಕೆಲವು ನಾಯಿಗಳನ್ನು ಸಾಕಿಕೊಂಡಿದ್ದ ನಾಯಿಗಳನ್ನು ನೋಡಿಕೊಳ್ಳಲು ಮಧ್ಯವರ್ತಿ ಮೂಲಕ ಕೇರ ಮೂಲದ ಸುನೀತಾ ಸಿತ್ಮಾ(47) ಎಂಬುವರನ್ನು ಕರೆತಂದಿದ್ದ. ನಂತರದ ದಿನಗಳಲ್ಲಿ ಸುನೀತಾ ಸ್ಮಿತಾ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ, ಇದಕ್ಕೆ ನಿರಾಕರಿಸುತ್ತಿದ್ದ ಈಕೆ ಮೇಲೆ ಮೇ 3ರಂದು ಮಾರಣಾಂತಿಕ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಂಭೀರ ಗಾಯಗೊಂಡ ಸುನೀತಾರನ್ನು ಸೂಲಿಬೆಲೆಯ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕ ಕೇರಳದ ಆಸ್ಪತ್ರೆಗೆ ರವಾನಿಸಲಾಗಿತ್ತು, ಚಿಕಿತ್ಸೆ ಲಕಾರಿಯಾಗದೆ ಮೇ 5 ರಂದು ಸುನೀತಾ ಕೊನೆಯುಸಿರೆಳೆದ್ದರು. ಈ ಪ್ರಕರಣ ಕೇರಳ ಪೊಲೀಸರಿಂದ ಸೂಲಿಬೆಲೆ ಠಾಣೆಗೆ ವರ್ಗಾವಣೆಯಾಗಿತ್ತು. ಸುನೀತಾ ಪತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.