ನೂರಾರು ಶಿಲಾಶಾಸನಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳು, ಪ್ರಾಚೀನ ಸ್ಮಾರಕಗಳು, ಕೋಟೆಕೊತ್ತಲುಗಳು, ಚಾರಣಧಾಮಗಳು ಇರುವ ಜಿಲ್ಲೆಯಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಅತ್ಯವಶ್ಯಕವಾಗಿದೆ. ರಾಜಧಾನಿ ಬೆಂಗಳೂರಿನ ಗಡಿ ಹಂಚಿಕೊಂಡಿರುವ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕೈಗಾರೀಕರಣ ವಿಸ್ತರಣೆಯಾಗುತ್ತಿದೆ, ಹೊಸ ಬಡಾವಣೆಗಳು ರೂಪುಗೊಳ್ಳುತ್ತಿವೆ. ಈ ನಗರೀಕರಣ ಭರದಲ್ಲಿ ಈಗಾಗಲೇ ಇತಿಹಾಸ ಗರ್ಭಸೇರಿರುವ ಶಿಲಾಶಾಸನಗಳು ಮಣ್ಣಿನಲ್ಲೇ ಮುಚ್ಚಿಹೋಗವ ಆತಂಕವಿದೆ ಎಂದು ಇತಿಹಾಸ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.