ಶಾಶ್ವತ ಕೃಷಿ ವಲಯದ ಹೆಸರಲ್ಲಿ ಗುಮ್ಮನ ಕಥೆ

Anti-Land Acquisition Struggle Committee
Anti-Land Acquisition Struggle Committee
Published on
ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಸರ್ಕಾರಗಳೇ ಶಾಶ್ವತವಲ್ಲ, ಅಂಥಹದ್ದರಲ್ಲಿ ಕೃಷಿ ಭೂಮಿಯನ್ನು ಶಾಶ್ವತ ವಿಶೇಷ ಕೃಷಿ ಭೂಮಿ ವಲಯ ಎಂದು ೋಷಿಸಲು ಇವರ‌್ಯಾರು? ರೈತರ ಜಮೀನುಗಳ ಮೇಲೆ ಸರ್ಕಾರಕ್ಕೆ ಯಾವ ಹಕ್ಕಿದೆ? ಇಂಥ ಗೊಂದಲಮಯ ಹೇಳಿಕೆಗಳ ಮೂಲಕ ಸರ್ಕಾರ ಅನುಸರಿಸುತ್ತಿರುವ ಕುತಂತ್ರವೇನು?.. ರಿಯಲ್ ಎಸ್ಟೇಟ್ ಮಾಡಲು ಅವಕಾಶ ನೀಡಲ್ಲ ಎನ್ನುವ ಸರ್ಕಾರ ಈಗ ಮಾಡುತ್ತಿರುವುದಾದರೂ ಏನು?..ಶಾಶ್ವತ ಕೃಷಿ ವಲಯದ ಹೆಸರಲ್ಲಿ ಗುಮ್ಮನ ಕಥೆ ಹೇಳಲು ಸರ್ಕಾರ ಹೊರಟಿದೆ.ಇವು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಆಕ್ರೋಶದ ನುಡಿಗಳಾಗಿವೆ.
ಸ್ಪಷ್ಟನೆಗೆ ವಿರೋಧ: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಡುವ ಆದೇಶದಲ್ಲಿ ‘ಪಹಣಿಯಲ್ಲಿ ಶಾಶ್ವತ ವಿಶೇಷ ಕೃಷಿ ವಲಯ’ ಎಂದು ನಮೂದಿಸುವುದು, ಭೂಮಿ ನೀಡುವ ರೈತರಿಗೆ 3 ತಿಂಗಳ ಕಾಲಾವಕಾಶ ನೀಡಿ ಭೂಮಿ ಪಡೆಯುವುದು ಎನ್ನುವ ಷರತ್ತುಗಳನ್ನು ಹಿಂಪಡೆಯಬೇಕು ಎಂಬ ಒತ್ತಾಯ ಹೆಚ್ಚುತ್ತಿದ್ದಂತೆ ಸರ್ಕಾರದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ನೀಡಿರುವ ಸ್ಪಷ್ಟನೆಗೆ ರೈತ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ರೈತರನ್ನು ಆತಂಕಕ್ಕೆ ದೂಡುವ ಯತ್ನ: ರೈತರು ಜಮೀನನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಅದಕ್ಕೆ ಮುಕ್ತ ಅವಕಾಶವಿದೆ. ರೈತರು ಅಪಪ್ರಚಾರ, ಗೊಂದಲ ಮತ್ತು ತಪ್ಪು ಕಲ್ಪನೆಗಳಿಗೆ ಕಿವಿಗೊಡಬಾರದು ಎಂದು ಸರ್ಕಾರ ಹೇಳುತ್ತಿದೆ, ಮತ್ತೊಂದೆಡೆ ರೈತರು ಸ್ವಯಂ ಆಗಿ ಭೂಮಿ ನೀಡಲು ಮುಂದಾದರೆ ಸ್ವಾಧೀನ ಮಾಡಿಕೊಳ್ಳಲಾಗುವುದು ಎನ್ನುತ್ತದೆ, ಇದಕ್ಕೆ 3 ತಿಂಗಳ ಗಡುವು ನೀಡಿದೆ. ಶಾಶ್ವತ ವಿಶೇಷ ಕೃಷಿ ವಲಯ ಎಂದು ೋಷಿಸಿ ಭೂಮಿಗೆ ಮೌಲ್ಯವಿಲ್ಲದಂತೆ ಮಾಡುವುದು ಇದರ ಉದ್ದೇಶವಾಗಿದೆ. ಅಥವಾ ಹಾಗೇ ಬಿಂಬಿಸುವ ಪ್ರಯತ್ನವಾಗಿದೆ. ಈ ಮೂಲಕ ರೈತರಲ್ಲಿ ಆತಂಕ ಸೃಷ್ಟಿಸಿ ಅವರೇ ಸ್ವತಃ ಭೂಮಿ ನೀಡುವ ಹಾಗೆ ಬಲೆ ಎಣಿಯುವ ತಂತ್ರವಾಗಿದೆ ಎಂಬುದು ಭೂಸ್ವಾಧೀನ ವಿರೋಧಿ ಸಮಿತಿಯ ಆರೋಪವಾಗಿದೆ.
ನಮ್ಮ ಭೂಮಿ ವಿಚಾರಕ್ಕೆ ಬರಲೇ ಬೇಡಿ: ಸುಮಾರು 4 ವರ್ಷಗಳ ಸುಧೀರ್ಘ ಹೋರಾಟದ ಲವಾಗಿ ನಮ್ಮ ಭೂಮಿಯನ್ನು ನಾವು ಉಳಿಸಿಕೊಂಡಿದ್ದೇವೆ. ಇದೀಗ ಸರ್ಕಾರ ಷರತ್ತುಗಳನ್ನು ಹಾಕುವ ಮೂಲಕ ಗೊಂದಲ ಸೃಷ್ಟಿಸಲು ಮುಂದಾದರೆ ಮತ್ತೆ ಹೋರಾಟ ನಡೆಸುತ್ತೇವೆ ಹೊರತು ಯಾವುದೇ ಕಾರಣಕ್ಕೂ ಸರ್ಕಾರದ ಕಪಿಮುಷ್ಟಿಗೆ ರೈತರನ್ನು ಸಿಲುಕಲು ಬಿಡುವುದಿಲ್ಲ. ಭೂಮಿ ಉಳಿಸಿಕೊಂಡ ನಮಗೆ ಷರತ್ತುಗಳನ್ನು ತೆಗೆಸುವುದು ಕಷ್ಟಸಾಧ್ಯವಲ್ಲ ಎಂಬುದು ರೈತ ಮುಖಂಡರ ಅಚಲ ನುಡಿಗಳಾಗಿವೆ. ನಮ್ಮ ಭೂಮಿ ವಿಚಾರಕ್ಕೆ ನೀವು ಬರಲೇಬೇಡಿ ಎಂಬುದು ರೈತ ಸಮುದಾಯದ ಒಕ್ಕೊರಲ ಒತ್ತಾಯವಾಗಿದೆ.
ಸರ್ಕಾರ ಪ್ರಮುಖ ಕೈವಾಡ: ರಾಜ್ಯ ಸರ್ಕಾರ ಪ್ರಭಾವಿ ಜನಪ್ರತಿನಿಧಿಗಳ ಹತ್ತಿರದ ಸಂಬಂಧಿಗಳು, ಆಪ್ತರು ಈ ಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದು, ಈ ಭಾಗದ ಭೂಮಿ ಇವರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ಆದ್ದರಿಂದ ಸರ್ಕಾರದ ಮೇಲೆ ಪ್ರಭಾವ ಬೀರಿ ಇಂಥ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಕೆಲವು ರೈತರಿಂದ ಅಗ್ರಿಮೆಂಟ್ ಮಾಡಿಸಿಕೊಂಡಿರುವ ದಲ್ಲಾಳಿಗಳು ಪರೋಕ್ಷವಾಗಿ ರೈತರಲ್ಲಿ ಆತಂಕ ಸೃಷ್ಟಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪಗಳು ರೈತ ವಲಯದಲ್ಲಿ ಚರ್ಚೆಯಾಗುತ್ತಿವೆ.
ಸರ್ಕಾರ ವಿಧಿಸಿರುವ ಷರತ್ತುಗಳು ರೈತರ ಮೇಲೆ ಸೇಡು ತೀರಿಸಿಕೊಳ್ಳುವ ಮತ್ತು ರೈತರನ್ನು ಭಯಪಡಿಸಿ ಭೂಮಿಯನ್ನು ಕಬಳಿಸುವ ತಂತ್ರವಾಗಿದೆ.ರೈತರ ಮಕ್ಕಳು ತಮ್ಮ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಏಕೆ ಬಳಸಬಾರದು? ಇದನ್ನು ಹೇಗೆ ನಿರ್ಬಂಧಿಸುತ್ತೀರಾ? ರೈತರಿಗೆ ಭೂಮಿಯ ಮೇಲೆ ಸಂಪೂರ್ಣ ಹಕ್ಕು ಇದೆ ಎಂದಾದರೆ ನಿಮ್ಮ ಷರತ್ತುಗಳು ಏಕೆ ಬೇಕು?
ಗೋಪಾಲಗೌಡ, ನಿವೃತ್ತ ನ್ಯಾಯಮೂರ್ತಿ
ಸರ್ಕಾರದ ಸ್ಪಷ್ಟನೆ ರೈತರಲ್ಲಿ ಗೊಂದಲ ಸೃಷ್ಟಿಸುವ ತಂತ್ರವಾಗಿದೆ, ಭೂಸ್ವಾಧೀನದಿಂದ ಕೈಬಿಟ್ಟಿದ್ದೇವೆ ಎನ್ನುವುದು, ಶಾಶ್ವತ ವಿಶೇಷ ಕೃಷಿ ವಲಯ ಎಂದು ೋಷಿಸುತ್ತೇವೆ ಎನ್ನುವುದು ಇವೆಲ್ಲ ಸರ್ಕಾರದ ಕುತಂತ್ರವಷ್ಟೇ. ಷರತ್ತುಗಳನ್ನು ಹಾಕಿ ಭೂಮಿಯ ಮೌಲ್ಯವಿಲ್ಲವೆಂಬಂತೆ ಬಿಂಬಿಸಿ ಪರೋಕ್ಷವಾಗಿ ರೈತರಿಂದ ಜಮೀನು ಕಿತ್ತುಕೊಳ್ಳುವ ಹುನ್ನಾರವಾಗಿದೆ. ಇದಕ್ಕೆಲ್ಲ ಅವಕಾಶ ನೀಡುವುದಿಲ್ಲ. ಭೂಮಿ ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ.
ಕಾರಹಳ್ಳಿ ಶ್ರೀನಿವಾಸ್, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net