ಅರ್ಹ ಹಿರಿಯ ನಾಗರಿಕರ ಮನೆಯಲ್ಲಿ ಯುವ ಸದಸ್ಯರು ವಾಸವಿರಬಾರದು. ಮನೆಯಲ್ಲಿ ಕೇವಲ ಒಬ್ಬರು ಅಥವಾ ಇಬ್ಬರು ಹಿರಿಯ ನಾಗರಿಕರು (75 ವರ್ಷ ಮೇಲ್ಪಟ್ಟವರು) ಮಾತ್ರ ಇರಬೇಕು. ಫಲಾನು ಭವಿಗಳು ಪಡಿತರ ಚೀಟಿ ಹೊಂದಿರಬೇಕು, ಮೊಬೈಲ್ ಸಂಖ್ಯೆಯನ್ನು ಪಡಿತರ ಚೀಟಿಗೆ ಲಿಂಕ್ ಮಾಡಿರಬೇಕು. ಫಲಾನುಭವಿಗಳು ಸ್ಥಳೀಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿಯೂ ನೋಂದಾಯಿಸಿಕೊ ಳ್ಳಬಹುದು. ನೋಂದಣಿ ಮಾಡಿದ ಫಲಾನು ಭವಿಗಳಿಗೆ ಆಯಾ ತಿಂಗಳ 1 ರಿಂದ 5ನೇ ತಾರೀಖಿನೊಳಗೆ ಸಮೀಪದ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪೂರೈಕೆಯಾಗುತ್ತದೆ. ಅಂತ್ಯೋದಯ ಅನ್ನ ಯೋಜನೆ ಅಥವಾ ಆದ್ಯತಾ ಕುಟುಂಬದ ಪಡಿತರ ಚೀಟಿ ಹೊಂದಿರುವ ಹಿರಿಯನಾಗರಿಕರು ಇದರ ಪ್ರಯೋಜನ ಪಡೆಯಬಹುದು. ಈ ಕುಟುಂಬಗಳಿಗೆ ಅವರ ಪಡಿತರಕ್ಕೆ ಅರ್ಹವಾದ ಆಹಾರ ಧಾನ್ಯಗಳು (ಉದಾಹರಣೆಗೆ, ಆದ್ಯತಾ ಕುಟುಂಬಕ್ಕೆ ಪ್ರತಿ ವ್ಯಕ್ತಿಗೆ 5 ಕೆಜಿ. ಅಂತ್ಯೋದಯ ಅನ್ನ ಯೋಜನೆ ಕುಟುಂಬಕ್ಕೆ 35 ಕೆಜಿ) ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.