

ಪ್ರಮುಖ ಮುಖ್ಯಾಂಶಗಳು
ನೆಲಮಂಗಲ:
ಅಂಗನವಾಡಿ ಶಿಕ್ಷಣವು ಮಕ್ಕಳ ವಿದ್ಯಾಭ್ಯಾಕ್ಕೆ ಮೊದಲ ಮೆಟ್ಟಿಲು. ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ಲಭಿಸಿದರೆ ಮಕ್ಕಳ ಬದುಕು, ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ. ಅಲ್ಲದೇ ಮಕ್ಕಳಲ್ಲಿ ಮಾನವೀಯ ಗುಣ ವೃದ್ಧಿಸಲು ಅಂಗನವಾಡಿ ಕೇಂದ್ರಗಳು ಪೂರಕವಾಗಲಿವೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ಬಡಾವಣೆಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿಮಾರ್ಣ ಮಾಡಿದ್ದು, ಶಾಸಕ ಎನ್.ಶ್ರೀನಿವಾಸ್ ಚಾಲನೆ ನೀಡಿದರು. ಮಹಿಳಾ ಚಾರಿಟಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜುಳಾ ಗಣೇಶ್, ಟಿಎಪಿಸಿಎಂಎಸ್ ನಿರ್ದೇಶಕ ನರಸಿಂಹಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ನಾಗೇಶ್, ಮೇಲ್ವಿಚಾರಕಿ ಹೇಮಾ, ಮುಖಂಡ ಚಂದ್ರಕುಮಾರ್, ವೆಂಕಟೇಶ್, ಮುನಿಯಪ್ಪ, ನಾರಾಯಣ್ರಾವ್, ಕೆ.ವಸಂತ್, ಕೆಂಪರಾಜು, ಲೋಕೇಶ್, ಭಕ್ತನಪಾಳ್ಯಮುನಿರಾಜು, ಪ್ರಸನ್ನಕುಮಾರ್, ರವಿಕುಮಾರ್, ಹನುಮಂತಮ್ಮ ಇತರರು ಇದ್ದರು.