ರಸ್ತೆ ಬದಿ ಕಸ ಸುರಿಯುವ ಜಾಗಕ್ಕೆ ಮುಕ್ತಿ

ದೊಡ್ಡಬಳ್ಳಾಪುರದ ಬಸವೇಶ್ವರ ನಗರದಲ್ಲಿ ಕಸದ ಪಾಯಿಂಟ್​ ಗುರತಿಸಿ ಸ್ವಚ್ಛಗೊಳಿಸಲಾಯಿತು. ಪೌರಾಯುಕ್ತ ಕಾರ್ತಿಕೇಶ್ವರ್​, ನಗರಸಭೆ ಸದಸ್ಯ ಪದ್ಮನಾಭ, ಆರೋಗ್ಯ ನಿರೀಕ್ಷಕಿ ಮುಕ್ತಾಂಬಿಕಾ, ಪ್ರಸಾದ್​, ಕಮ್ಯುನಿಟಿ ಮೊಬೈಲೈಸರ್​ ಸುಪ್ರೀತಾ, ನವೀನ, ಮಧುಶ್ರೀ, ಸತ್ಯವತಿ, ಪೌರಕಾರ್ಮಿಕರಾದ ಹನುಮಂತರಾಯುಡು, ರಮೇಶ್​, ಅಂಜೀನಮ್ಮ, ಸ್ಥಳಿಯರಾದ ನರಸಿಂಹ, ಜಯರಾಮ್​ ಇದ್ದರು.
ದೊಡ್ಡಬಳ್ಳಾಪುರದ ಬಸವೇಶ್ವರ ನಗರದಲ್ಲಿ ಕಸದ ಪಾಯಿಂಟ್​ ಗುರತಿಸಿ ಸ್ವಚ್ಛಗೊಳಿಸಲಾಯಿತು. ಪೌರಾಯುಕ್ತ ಕಾರ್ತಿಕೇಶ್ವರ್​, ನಗರಸಭೆ ಸದಸ್ಯ ಪದ್ಮನಾಭ, ಆರೋಗ್ಯ ನಿರೀಕ್ಷಕಿ ಮುಕ್ತಾಂಬಿಕಾ, ಪ್ರಸಾದ್​, ಕಮ್ಯುನಿಟಿ ಮೊಬೈಲೈಸರ್​ ಸುಪ್ರೀತಾ, ನವೀನ, ಮಧುಶ್ರೀ, ಸತ್ಯವತಿ, ಪೌರಕಾರ್ಮಿಕರಾದ ಹನುಮಂತರಾಯುಡು, ರಮೇಶ್​, ಅಂಜೀನಮ್ಮ, ಸ್ಥಳಿಯರಾದ ನರಸಿಂಹ, ಜಯರಾಮ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಬದಿ ಕಸ ಸುರಿಯುವ ಜಾಗಕ್ಕೆ ಮುಕ್ತಿ
ರಸ್ತೆ ಬದಿ ಕಸ ಸುರಿಯುವ ಜಾಗಕ್ಕೆ ಮುಕ್ತಿ
* ಸುಣ್ಣ ಬಣ್ಣ ಬಳಿದು ಹೊಸ ಅಲಂಕಾರ
* ಎಲ್ಲೆಂದರಲ್ಲೆ ಕಸ ಹಾಕದಂತೆ ನಗರಸಭೆ ಎಚ್ಚರಿಕೆ
ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ರಸ್ತೆ ಬದಿಗಳಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಮುಂದಾಗಿರುವ ನಗರಸಭೆ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದೆ. ಪ್ರಮುಖ ಕಸದ ಬ್ಲಾಕ್​ಸ್ಪಾಟ್​ಗಳನ್ನು ಸ್ವಚ್ಛಗೊಳಿಸಿ, ಬಣ್ಣದ ಚಿತ್ರಗಳನ್ನು ಬಿಡಿಸುವುದು, ಅನುಪಯುಕ್ತ ವಸ್ತುಗಳಿಂದ ಅಲಂಕರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ನಗರದ ಎರಡನೇ ವಾರ್ಡ್​ ಬಸವೇಶ್ವರ ನಗರದಲ್ಲಿ ಶುಕ್ರವಾರ ಕಸದ ಸ್ಪಾಟ್​ ಗುರುತಿಸಿ ಸ್ವಚ್ಛಗೊಳಿಸಲಾಯಿತು. ಈ ವೇಳೆ ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್​ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ 110 ರಿಂದ 120 ಬ್ಲಾಕ್​ಸ್ಪಾಟ್​ ಗುರುತಿಸಲಾಗಿದ್ದು, ಇವುಗಳಲ್ಲಿ ಈಗಾಗಲೇ 52 ಸ್ಥಳ ಸಂಪೂರ್ಣ ಸ್ವಚ್ಛಗೊಳಿಸಿ, ಮತ್ತೆ ಕಸ ಹಾಕದಂತೆ ಗೋಡೆಗಳ ಮೇಲೆ ಆಕರ್ಷಕ ಚಿತ್ರ ಬಿಡಿಸಲಾಗಿದೆ. ಜತೆಗೆ ಜಾಗೃತಿ ಮೂಡಿಸುವ ಸೂಚನಾ ಫಲಕ ಅಳವಡಿಸಲಾಗಿದೆ. ಉಳಿದ ಸ್ಥಳಗಳನ್ನೂ ಇದೇ ಮಾದರಿಯಲ್ಲಿ ಕಸಮುಕ್ತಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಕುರಿತು ಪೌರಕಾರ್ಮಿಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಬ್ಲಾಕ್​ಸ್ಪಾಟ್​ಗಳ ಮೇಲೆ ನಿರಂತರ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನಿಯಮ ಉಲ್ಲಂಘಿಸಿದವರಿಗೆ ದಂಡ
ನಗರಸಭೆಯ 31 ವಾರ್ಡ್​ಗಳಲ್ಲಿ ಅವಕಾಶ ಇರುವ ಬ್ಲಾಕ್​ಸ್ಪಾಟ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ಕಸ ಎಸೆಯುವವರನ್ನು ಗುರುತಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಮೊಬೈಲ್​ ಆ್ಯಪ್​ ಮೂಲಕ ಮನೆ ಮನೆಗಳಿಂದ ಕಸ ಸಂಗ್ರಹಣೆಯ ಮಾಹಿತಿ ಪರಿಶೀಲಿಸಲಾಗುತ್ತಿದೆ. ನಗರಸಭೆಯ ವಾಹನಗಳಿಗೆ ಕಸ ನೀಡದೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ಮೊದಲು ಎಚ್ಚರಿಕೆ ನೀಡಲಾಗುತ್ತಿದ್ದು, ಬಳಿಕವೂ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೌರಾಯುಕ್ತ ಕಾರ್ತಿಕೇಶ್ವರ್​ ತಿಳಿಸಿದರು.
ನಗರಸಭೆ ಸದಸ್ಯ ಪದ್ಮನಾಭ ಮಾತನಾಡಿ, ಕೆಲ ನಿವಾಸಿಗಳು ರಾತ್ರಿ ವೇಳೆ ರಸ್ತೆ ಬದಿ ಮತ್ತು ಖಾಲಿ ಜಾಗಗಳಲ್ಲಿ ಕಸ ಎಸೆಯುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ನಗರ ಸ್ವಚ್ಛವಾಗಿಡಲು ನಗರಸಭೆಯ ಪ್ರಯತ್ನದ ಜತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ಪರಿಸರ ಮಾಲಿನ್ಯದ ಜತೆಗೆ ಜಾನುವಾರುಗಳ ಆರೋಗ್ಯಕ್ಕೂ ಗಂಭೀರ ಸಮಸ್ಯೆ ಎದುರಾಗುತ್ತಿದೆ. ಆಹಾರಕ್ಕಾಗಿ ಕಸದ ರಾಶಿಗಳ ಬಳಿ ಬರುವ ದನಗಳು ಹಾಗೂ ನಾಯಿಗಳು ಪ್ಲಾಸ್ಟಿಕ್​ ಸೇರಿ ಅಪಾಯಕಾರಿ ತ್ಯಾಜ್ಯ ಸೇವಿಸುವ ಸಾಧ್ಯತೆ ಹೆಚ್ಚಿದೆ ಎಂದರು.
10ಡಿಬಿಪಿ1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net