ಸುಮಾರು 50 ವರ್ಷದ ಲಲಿತಮ್ಮ ಎಂಬುವರು ಕಳೆದ 10-15 ವರ್ಷಗಳಿಂದ ಇದೇ ಗ್ರಾಮದಲ್ಲಿ ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದರು. ಕೆಲವು ವರ್ಷದ ಹಿಂದೆ ಪತಿ ಮೃತಪಟ್ಟ ನಂತರ ಅವರು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೂ, ಕಳೆದ ಕೆಲವು ತಿಂಗಳುಗಳಿಂದ ಆದಾಯದ ಕೊರತೆಯಿಂದ ಮನೆ ತೊರೆದಿದ್ದರು. ನಿರಾಶ್ರಿತರಾಗಿ ಬದುಕು ಸವೆಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ನೀರು, ಆಹಾರ, ವಸತಿ ಹಾಗೂ ಸ್ನಾನದಂತಹ ಮೂಲ ಸೌಲಭ್ಯಗಳಿಲ್ಲದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸ್ಥಳೀಯ ಸಾರ್ವಜನಿಕರು ಹಾಗೂ ಅಕ್ಕಪಕ್ಕದ ಕೆಲವು ಮನೆಯವರು ನೀಡುತ್ತಿದ್ದ ಬ್ರೆಡ್, ಬಿಸ್ಕೆಟ್‌ನಿಂದಲೇ ಹೊಟ್ಟೆ ಹೊರೆದುಕೊಳ್ಳುವಂತ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದರು.