ದೊಡ್ಡಬಳ್ಳಾಪುರ ಮಹಿಳಾ ಠಾಣೆ ಇನ್‌ಸ್ೆಕ್ಟರ್ ನವೀನ್‌ಕುಮಾರ್ ನೇತೃತ್ವದಲ್ಲಿ ನಾಲ್ವರು ಮಹಿಳಾ ಹೋಮ್‌ಗಾರ್ಡ್‌ಗಳು, ಇಬ್ಬರು ಮಹಿಳಾ ಕಾನ್ಸ್‌ಟೇಬಲ್ ಸೇರಿ ಪಿಎಸ್‌ಐ, ಎಎಸ್‌ಐ ನೇತೃತ್ವದಲ್ಲಿ ಸಜ್ಜಾಗಿರುವ ಜಿಲ್ಲಾ ಅಕ್ಕಪಡೆ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ಎರಡು ಕಡೆ ನಡೆಯಬೇಕಿದ್ದ ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಿರುವುದು, ವೇಶ್ಯಾವಾಟಿಕೆ ದಂಧೆ ತಡೆದು ಸಂತ್ರಸ್ತೆಯರನ್ನು ರಕ್ಷಣೆ ಮಾಡಿರುವುದು, 10 ಕ್ಕೂ ಹೆಚ್ಚು ಬಾಲ್ಯಕಾರ್ಮಿಕರ ರಕ್ಷಣೆ ಸೇರಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು, ಕೈಗಾರಿಕಾ ಪ್ರದೇಶಗಳಲ್ಲಿ ರೌಂಡ್ಸ್ ಮೂಲಕ ಮಹಿಳೆಯಲ್ಲಿ ಸುರಕ್ಷತಾ ಭಾವನೆ ಮೂಡಿಸುವುದು ಸೇರಿ ಹಲವು ಪೊಲೀಸಿಂಗ್ ಕಾರ್ಯದಲ್ಲಿ ಅಕ್ಕಪಡೆ ಹೆಸರುಗಳಿಸಿದೆ.