ಈ ಅಜೋಲಾ ಘಟಕಗಳನ್ನು ರೈತರ ಮನೆ ಅಥವಾ ಕೊಟ್ಟಿಗೆಯ ಸಮೀಪವೇ ಕಡಿಮೆ ಸ್ಥಳದಲ್ಲಿ ನಿರ್ಮಿಸಬಹುದಾಗಿದೆ. ಸುಮಾರು 10 ಅಡಿ ಉದ್ದ, 4 ಅಡಿ ಅಗಲ ಹಾಗೂ 1 ಅಡಿ ಆಳದ ಅಳತೆಯಲ್ಲಿ ಘಟಕ ನಿರ್ಮಿಸಲಾಗುತ್ತದೆ. ಪ್ರತಿ ಘಟಕದ ಒಟ್ಟು ವೆಚ್ಚ 3,150 ರೂಪಾಯಿಆಗಲಿದ್ದು ಇದರಲ್ಲಿ ಸಾಮಗ್ರಿ ಹಾಗೂ ಕೂಲಿ ವೆಚ್ಚ ಸೇರಿದೆ. ಶೇ.80 ನೆರಳು ಬಲೆ ಮತ್ತು ಬಿದಿರು ಇರಲಿದೆ, ಫಲವತ್ತಾದ ಮಣ್ಣು, ಸಗಣಿ ಮತ್ತು ಸೂಪರ್ ಫಾಸ್ಫೇಟ್ ಮಿಶ್ರಣದಲ್ಲಿ ಮಾಡಲಾಗುತ್ತದೆ. ಸ್ಥಳ ಸಿದ್ಧತೆ, ತೊಟ್ಟಿ ಅಳವಡಿಕೆ, ಸಂರಕ್ಷಣೆ ಮತ್ತು ಬೀಜ ಬಿತ್ತನೆ ಕೆಲಸಕ್ಕಾಗಿ 2 ಮಾನವ ದಿನಗಳ ಕೂಲಿ ವೆಚ್ಚ (ದರ ದಿನಕ್ಕೆ 350 ರೂ. ನಂತೆ) 700 ರೂಪಾಯಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.