ಇತ್ತೀಚಿನ ದಿನಗಳಲ್ಲಿ, ವಿಮಾಣನಿಲ್ದಾಣದಲ್ಲಿ ಅನಧಿಕೃತ ಕ್ಯಾಬ್‌ಗಳು, ಆಗಮನದ ದ್ವಾರ ಹಾಗೂ ನಿರ್ಗಮನ ರ‌್ಯಾಂಪ್‌ಗಳ ಹೊರಗೆ ದೀರ್ಘಕಾಲದ ನಿಲುಗಡೆಯಿಂದ ಹಾಗೂ ರಸ್ತೆಬದಿಯಲ್ಲೇ ಪಿಕ್‌ಅಪ್ ಮಾಡಿಕೊಳ್ಳುತ್ತಿರುವುದರಿಂದ ವಾಹನ ದಟ್ಟಣೆ ಪ್ರಮಾಣ ಹೆಚ್ಚುತ್ತಲೇ ಇತ್ತು. ಇದರಿಂದ ಜನದಟ್ಟಣೆ, ಪ್ರಯಾಣಿಕರ ಅನಾನುಕೂಲತೆಗೆ ಕಾರಣವಾಗುತ್ತಿವೆ, ಅನಧಿಕೃತ ಪ್ರದೇಶಗಳಲ್ಲಿ ನಿಲುಗಡೆ ಮಾಡುವುದು ಅಥವಾ ಅನುಮತಿಸಲಾದ ಕಾಯುವ ಅವಧಿ ಮೀರಿ ಉಳಿಯುವುದು ಸೇರಿ ಯಾವುದೇ ನಿಯಮ ಮೀರಿದ ನಡವಳಿಕೆಗೆ ದಂಡ ವಿಧಿಸಲು ಮುಂದಾಗಲಾಗಿದೆ.