2025 ರ ವರ್ಷಾಂತ್ಯಕ್ಕೆ ವಿಮಾನ ನಿಲ್ದಾನವು 79 ದೇಶೀಯ ಮತ್ತು 34 ಅಂತಾರಾಷ್ಟ್ರೀಯ ನಗರಗಳನ್ನು ಒಳಗೊಂಡ 113 ಪ್ರಯಾಣಿಕರ ತಾಣಗಳಿಗೆ ಸಂಪರ್ಕ ಹೊಂದಿದೆ. ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಮತ್ತು ಪುಣೆ ಪ್ರಮುಖ ದೇಶೀಯ ತಾಣಗಳಾಗಿ ಹೊರಹೊಮ್ಮಿದರೆ, ದುಬೈ, ಅಬುಧಾಬಿ, ಸಿಂಗಾಪುರ, ಲಂಡನ್ ಹೀಥ್ರೂ ಮತ್ತು ಕೌಲಾಲಂಪುರ್ ಅಂತಾರಾಷ್ಟ್ರೀಯ ಜಾಲವನ್ನು ಮುನ್ನಡೆಸಿವೆ. ವರ್ಷದಲ್ಲಿ ಹಲವು ಹೊಸ ಮಾರ್ಗಗಳನ್ನು ಸೇರಿಸಲಾಗಿದ್ದು, ದೇಶಿಯ ಮಾರ್ಗದಲ್ಲಿ ಹಿಂದನ್, ಜೈಸಲ್ಮೇರ್, ಸಿಲ್ಚಾರ್ ಮತ್ತು ನವಿ ಮುಂಬೈ ಸೇರ್ಪಡೆಗೊಂಡಿವೆ. ಹಾಗೆಯೇ, ದಮ್ಮಾಮ್, ಹೋಚಿ ಮಿನ್‌ಸಿಟಿ, ಕ್ರಾಬಿ, ಹನೋಯ್ ಮತ್ತು ರಿಯಾದ್ ಅಂತಾರಾಷ್ಟ್ರೀಯ ಮಾರ್ಗಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.