ರಸ್ತೆ ಅಪಘಾತದಲ್ಲಿ ಇಬ್ಬರು ಸಾವು

accident
accident
Published on
ವಿಜಯವಾಣಿ ಸುದ್ದಿಜಾಲ ನೆಲಮಂಗಲ
ರಾ.ಹೆದ್ದಾರಿ 75ರ ಮಲ್ಲರಬಾಣವಾಡಿ ಗೇಟ್ ಬಳಿ ಬುಧವರ ಟ್ಯಾಕ್ಟರ್ ಹಾಗೂ ಕ್ಯಾಂಟರ್ ಅಪಘಾತದಲ್ಲಿ ಟ್ಯಾಕ್ಟರ್ ಚಾಲಕ ಹಾಗೂ ಆತನ ಸ್ನೇಹಿತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಗಡಿ ತಾಲೂಕು ಗುಡೇಮಾರನಹಳ್ಳಿ ನಿವಾಸಿಗಳಾದ ಚಾಲಕ ಪ್ರೇಮ್ ಕುಮಾರ್(37), ರಮೇಶ್(38) ಮೃತರು.
ಬುಧವಾರ ಬೆಳಗ್ಗೆ 8:30ರ ವೇಳೆಯಲ್ಲಿ ಪ್ರೇಮ್‌ಕುಮಾರ್ ಹಾಗೂ ರಮೇಶ್ ಇಬ್ಬರು ಗುಡೇಮಾರನಹಳ್ಳಿ ಗ್ರಾಮದಿಂದ ಟ್ಯಾಕ್ಟರ್ ತಗೆದುಕೊಂಡು ಮಲ್ಲರಬಾಣವಾಡಿಗೆ ತೆರಳುತ್ತಿದ್ದರು. ರಾ.ಹೆದ್ದಾರಿ 75ರ ಮಲ್ಲರಬಾಣವಾಡಿ ಗೇಟ್ ಬಳಿ ನೆಲಮಂಗಲ ಕಡೆಯಿಂದ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಟ್ಯಾಕ್ಟರ್ ಪಲ್ಟಿಯಾಗಿ ತೀವ್ರ ರಕ್ತಸ್ರಾವದಿಂದ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಟ್ಯಾಕ್ಟರ್ ಹಾಗೂ ಲಾರಿ ನಜ್ಜುಗುಜ್ಜಾಗಿದೆ. ಕ್ಯಾಂಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿ ಹಾಗೂ ಟ್ಯಾಕ್ಟರ್‌ನನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2ಕಿ.ಮೀ ಸಂಚಾರ ಸಿಕ್ಕು:
ಬೆಳ್ಳಂಬೆಳಗ್ಗೆ ರಾ.ಹೆದ್ದಾರಿ 75ರ ಮಲ್ಲರಬಾಣವಾಡಿ ಗೇಟ್ ಬಳಿ ಸಂಬವಿಸಿದ್ದ ರಸ್ತೆ ಅಪಘಾತದಲ್ಲಿ ವಾಹನಗಳು ರಸ್ತೆಯಲ್ಲಿ ಫಲ್ಟಿಯಾಗಿದ್ದು ಸುಮಾರು 2ಕಿ.ಮೀ ಸಂಚಾರ ಸಿಕ್ಕು ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಕ್ರೈನ್ ಮೂಲಕ ವಾಹನಗಳನ್ನು ಸ್ಥಳಾಂತರಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net