ಅ.10ರಂದು ನಡೆದಿದ್ದ ಅಪಘಾತ ಪ್ರಕರಣ ಬೆನ್ನತ್ತಿದ ಪೊಲೀಸರು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪ್ರಕರಣ ಬೇಧಿಸಿದ್ದಾರೆ. ಇಬ್ಬರು ಯುವಕರ ತಲೆ ಹಾಗೂ ಎದೆ ಮೇಲೆ ಆಟೋ ಹರಿದಿದ್ದು, ಇದರ ಪರಿಣಾಮ ಯುವಕರು ಪ್ರಾಣಬಿಟ್ಟಿದ್ದರು. ಅಪಘಾತವಾದ ಕೂಡಲೇ ಚಾಲಕ ಸುರೇಶ್ ಎಂಬುವರು ಆಟೋ ಸಮೇತ ಚಿಕ್ಕಬಳ್ಳಾಪುರದ ಆರ್ ಎಂಸಿಗೆ ಪರಾರಿಯಾಗಿದ್ದರು. ಸಿಸಿ ಟಿವಿ ಪರಿಶೀಲನೆ ವೇಳೆ ಅನುಮಾಸ್ಪದ ಆಟೋ ಸಂಚಾರಗ ಗಮನಿಸಿದ ಪೊಲೀಸರು ಚಿಕ್ಕಬಳ್ಳಾಪುರದ ಆರ್‌ಎಂಸಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಆರೋಪಿ ಚಾಲಕನ ಮಗ ವಿವರ ಪತ್ತೆಯಾಗಿತ್ತು. ಮಗನನ್ನು ವಿಚಾರಣೆ ನಡೆಸಿದಾಗ ಆರೋಪಿ ಕೊಡಿಗೇಹಳ್ಳಿಯವನು ಎಂದು ಪತ್ತೆಯಾಗಿದ್ದು ಆಟೋ ಹಾಗೂ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ದೊಡ್ಡಬಳ್ಳಾಪುರದ ಕೊಡಿಗೇಹಳ್ಳಿ ಮೂಲದ ಆರೋಪಿ ಮಗನ ಹೆಸರಿನಲ್ಲಿರುವ ತರಕಾರಿ ಸಾಗಿಸುವ ಆಟೋ ಚಾಲನೆ ವೇಳೆ ಈ ಅಪಘಾತ ಸಂಭವಿಸಿತ್ತು ಎನ್ನಲಾಗಿದೆ. ಆರೋಪಿ ಹೆಸರಲ್ಲಿ ವಾಹನ ಚಾಲನೆ ಪರವಾನಗಿ ಹಾಗೂ ಇತರೆ ಯಾವುದೇ ದಾಖಲೆಗಳು ಇರುವುದಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.