ಮಾಂಸಾಹಾರಿ ಪ್ರಾಣಿಗಳನ್ನು ಚುರುಕಾಗಿಸಿರಲು ಸುಗಂಧ ದ್ಯವ್ಯ!

ಆನೇಕಲ್​ ತಾಲೂಕಿನ ಬನ್ನೇರುಟ್ಟ ಜೈವಿಕ ಉದ್ಯಾನದಲ್ಲಿ ಸುಗಂಧ್ಯದ್ರವ್ಯ ಸಿಂಪಡಿಸಿದ ಬಟ್ಟೆಗಳನ್ನು ಚಿರತೆ ಮೂಸುತ್ತಿರುವುದು.
ಆನೇಕಲ್​ ತಾಲೂಕಿನ ಬನ್ನೇರುಟ್ಟ ಜೈವಿಕ ಉದ್ಯಾನದಲ್ಲಿ ಸುಗಂಧ್ಯದ್ರವ್ಯ ಸಿಂಪಡಿಸಿದ ಬಟ್ಟೆಗಳನ್ನು ಚಿರತೆ ಮೂಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಾಂಸಾಹಾರಿ ಪ್ರಾಣಿಗಳನ್ನು ಚುರುಕಾಗಿಸಿರಲು ಸುಗಂಧ ದ್ಯವ್ಯ!
ಆನೇಕಲ್​: ಬನ್ನೇರುಟ್ಟ ಜೈವಿಕ ಉದ್ಯಾನವನಲ್ಲಿ ದೊಡ್ಡ ಬೆಕ್ಕಿನ ಜಾತಿಯ ಮಾಂಸಾಹಾರಿ ಪ್ರಾಣಿಗಳನ್ನು ಚುರುಕಾಗಿಸಿರಲು ವಿಶಿಷ್ಟ ಪ್ರಯೋಗ ಕೈಗೊಳ್ಳಲಾಗಿದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಪುರುಷರು ಬಳಸುವ ಸುಗಂಧದ್ರವ್ಯ (ಪಫ್ಯೂರ್ಮ್​ ) ಸಿಂಪಡಿಸಿದ ಬಟ್ಟೆಗಳನ್ನು ಇಟ್ಟು, ಪ್ರಾಣಿಗಳು ವಾಸನೆ ಗ್ರಹಿಸಿ ಅವುಗಳಲ್ಲಿ ಆಗುವ ವರ್ತನೆಗಳನ್ನು ಅಧ್ಯಯನ ಮಾಡುವ ಪ್ರಯೋಗ ಯಶಸ್ವಿಯಾಗಿದೆ.
ಇತ್ತೀಚೆಗೆ ಒಂದು ವಾರದ ಪೈಲಟ್​ ಯೋಜನೆಯಲ್ಲಿ ಸಿಂಹ, ಹುಲಿ, ಚಿರತೆಗಳ ಆವರಣದಲ್ಲಿ ಕ್ಲೆನ್ವಿನ್​ ಕ್ಲೆನ್​ ಕಂಪನಿಯ ಸುಗಂಧ ದ್ರವ್ಯ ಸಿಂಪಡಿಸಿದ ಬಟ್ಟೆಗಳನ್ನು ಇಡಲಾಯಿತು. ಈ ಕಂಪನಿಯ ಸುಗಂಧದ್ರವ್ಯದಲ್ಲಿ ಕಸ್ತೂರಿ ಹೆಸರಿನ ಪುನುಗು ಬೆಕ್ಕು ಹೊರ ಸೂಸುವ ಪರಿಮಳ ಹೋಲುವುದರಿಂದ ಇದೇ ಪರ್ಪೂಮ್​ ಪ್ರಯೋಗಕ್ಕೆ ಬಳಸಲಾಗಿದೆ.
ಸದ್ಯ ಇದೇ ಮೊದಲ ಬಾರಿಗೆ ಉದ್ಯಾನವದಲ್ಲಿ ಇಂತಹ ಪ್ರಯೋಗ ಮಾಡಿಲಾಗಿದ್ದು, ದೊಡ್ಡ ಬೆಕ್ಕಿನ ಜಾತಿಗೆ ಸೇರಿರುವ ಆಯ್ದ ಹುಲಿ, ಸಿಂಹ, ಚಿರತೆ ಪ್ರಾಣಿಗಳ ಆವರಣದಲ್ಲಿ ಸುಗಂಧದ್ರವ್ಯ ಸಿಂಪಡಿಸಿದ ಬಟ್ಟೆಗಳನ್ನು ಇಡಲಾಗಿತ್ತು. ಆರಂಭದಲ್ಲಿ ಗಾಬರಿಯಿಂದ ಕಂಡ ಪ್ರಾಣಿಗಳು ನಂತರ ಬಟ್ಟೆಗಳನ್ನು ಪದೇಪದೆ ಮೂಸಿ, ನೆಕ್ಕಿ, ಮುಖ ಉಜ್ಜಿದವು. ಚಿರತೆಗಳು ಸತತ 15 ನಿಮಿಷ ಸಕ್ರಿಯವಾಗಿ ಈ ಕ್ರಿಯೆಯಲ್ಲಿ ತೊಡಗಿದ್ದವು. ಒಟ್ಟಾರೆ ದೊಡ್ಡ ಬೆಕ್ಕುಗಳು 15&20 ನಿಮಿಷ ಆಸಕ್ತಿ ತೋರಿದವು. ಸಹಜ ವರ್ತನೆಗಿಂತ ಹುರುಪಿನಿಂದ ಲವಲವಿಕೆಯಿಂದ ಇರುವುದು ಕಂಡು ಬಂದಿದೆ.
ವೈದ್ಯಕಿಯ ತಂಡದೊಂದಿಗೆ ಚರ್ಚೆ: ಉದ್ಯಾನವನ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯಸೇನ್​ ಮಾತನಾಡಿ, ಮಾಂಸಾಹಾರಿಗಳು ಸುತ್ತಲಿನ ಪರಿಸರ ಅರಿಯಲು ವಾಸನೆ ಮೇಲೆ ಹೆಚ್ಚು ಅವಲಂಬಿತ. ಹೊಸ ವಾಸನೆ ಬಂದಾಗ ಹೆಚ್ಚು ಕೇಂದ್ರಿಕೃತವಾಗಿ ಗಮನಿಸುತ್ತವೆ. ಇದೇ ಉದ್ದೇಶದಿಂದ ಸುಗಂಧ ದ್ರವ್ಯ ಪ್ರಯೋಗ ಮಾಡಲು ಮುಂದಾದೆವು. ಸದ್ಯ ಬಳಸಿದ ಪಫ್ಯೂರ್ಮ್​ನಲ್ಲಿ "ಸಿವೆಟೋನ್​' ಇದೆ, ಇದು ಕಸ್ತೂರಿ ಬೆಕ್ಕಿನ ಸ್ರವಿಸುವಿಕೆಗೆ ಹೋಲುತ್ತದೆ. ದೊಡ್ಡ ಬೆಕ್ಕುಗಳಿಗೆ ಇದು ಜೈವಿಕವಾಗಿ ಮಹತ್ವದ ಸಂಕೇತ. ಸೆರೆಯಲ್ಲಿರುವ ಪ್ರಾಣಿಗಳ ಸಹಜ ವರ್ತನೆ ಉತ್ತೇಜಿಸಿ, ಇಂದ್ರಿಯಗಳನ್ನು ಸಕ್ರಿಯಗೊಳಿಸಿ, ಮಾನಸಿಕವಾಗಿ ಚುರುಕಾಗಿಡುವುದು. ಸದ್ಯ ಈ ಪ್ರಯೋಗದಿಂದಾಗುವ ಸಾಧಕ&ಬಾಧಕಗಳನ್ನು ಪರಿಗಣಿಸಿ ಉದ್ಯಾನವನದ ಎಲ್ಲ ಮಾಂಸಹಾರಿ ಪ್ರಾಣಿಗಳಿಗೆ ಈ ಚಟುವಟಿಕೆ ನಡೆಸಬೇಕೇ? ಎಂಬುದನ್ನು ವೈದ್ಯಕಿಯ ತಂಡದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net