ಪ್ರತಿ ಲೀಟರ್​ ಹಾಲು ದರ 10 ರೂ.ಏರಿಕೆ ಮಾಡಲಿ / DODABALLAPUR

ದೊಡ್ಡಬಳ್ಳಾಪುರದ ಬಮುಲ್​ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಮುಲ್​ ನಿರ್ದೇಶಕ ಬಿ.ಸಿ.ಆನಂದ್​ ಕುಮಾರ್​, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಮುತ್ತೇಗೌಡ, ತಾಲೂಕು ಅಧ್ಯಕ್ಷ ಹನುಮೇಗೌಡ, ಪ್ರಧಾನ ಕಾರ್ಯದರ್ಶಿ ಸತೀಶ್​, ಎಂಪಿಸಿಎಸ್​ಗಳ ನೌಕರರ ಸಂಘದ ಅಧ್ಯಕ್ಷ ರವೀಂದ್ರ ಮತ್ತಿತರರು ಇದ್ದರು.
ದೊಡ್ಡಬಳ್ಳಾಪುರದ ಬಮುಲ್​ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಮುಲ್​ ನಿರ್ದೇಶಕ ಬಿ.ಸಿ.ಆನಂದ್​ ಕುಮಾರ್​, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಮುತ್ತೇಗೌಡ, ತಾಲೂಕು ಅಧ್ಯಕ್ಷ ಹನುಮೇಗೌಡ, ಪ್ರಧಾನ ಕಾರ್ಯದರ್ಶಿ ಸತೀಶ್​, ಎಂಪಿಸಿಎಸ್​ಗಳ ನೌಕರರ ಸಂಘದ ಅಧ್ಯಕ್ಷ ರವೀಂದ್ರ ಮತ್ತಿತರರು ಇದ್ದರು.
Published on
ದೊಡ್ಡಬಳ್ಳಾಪುರ : ಹೈನುಗಾರರು ಬಳಸುವ ಹಿಂಡಿ, ಬೂಸ ಮತ್ತು ಉತ್ಪಾದನ ಕಚ್ಚಾ ವಸ್ತುಗಳು, ಪ್ರತಿನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ತತ್ತರಿಸಿದ್ದಾರೆ. ಈ ಮಧ್ಯೆ ರಸಗೊಬ್ಬರಗಳ ಬೆಲೆ ಏರಿಕೆ ಜತೆಗೆಅಭಾವ ಸೃಷ್ಟಿಯಾಗಿದೆ. ಇದರಿಂದ ರೈತರು ತತ್ತರಿಸಿದ್ದಾರೆ. ಹೀಗಾಗಿ ಶೀಘ್ರವಾಗಿ ಸರ್ಕಾರ ರೈತರಿಂದ ಖರೀದಿಸುವ ಪ್ರತಿ ಲೀಟರ್​ ಹಾಲಿಗೆ 10 ರೂ.ಏರಿಕೆ ಮಾಡಬೇಕು ಎಂದು ಬಮುಲ್​ ನಿರ್ದೇಶಕ ಬಿ.ಸಿ ಆನಂದ್​ ಕುಮಾರ್​ ಒತ್ತಾಯಿಸಿದರು.
ನಗರದ ಬಮುಲ್​ ಶಿಬಿರ ಕಚೇರಿಯಲ್ಲಿ ರೈತ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಲಿನ ಪ್ರೋತ್ಸಾಹಧನ ಮತ್ತು ಸರ್ಕಾರದಿಂದ 10 ರೂ. ಹೆಚ್ಚಿಸುವಂತೆ ಒತ್ತಾಯಿಸಿ ತಾಲೂಕಿನ ಎಲ್ಲ ರೈತರು ಜು.9ಕ್ಕೆ ಜಿಲ್ಲಾಧಿಕಾರಿಯವರಮೂಲಕ ಸಿಎಂ ಡಿ.ಕೆ. ಶಿವಕುಮಾರ್​ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಪಕ್ಷಾತಿತವಾಗಿ ಎಲ್ಲ ಮುಖಂಡರು ಈ ಹೋರಾಟಕ್ಕೆ ಕೈಜೋಡಿಸಬೇಕು. ರಾಜ್ಯಾದ್ಯಂತ ಗ್ರಾಮಾಂತರ ಭಾಗದಲ್ಲಿ ಶೇ.80 ಮಹಿಳೆಯರು ಹೈನುಗಾರಿಕೆಯಿಂದಲೇ ಬದುಕುಸಾಗಿಸುತ್ತಿದ್ದಾರೆ. ಲಕ್ಷಾಂತರ ರೈತರು ಜೀವನ ರೂಪಿಸಿಕೊಂಡಿದ್ದಾರೆ. ಬರದ ಛಾಯೆ ರೈತರ ಜೀವನಕ್ಕೆ ಬರೆ ಹಾಕಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಸರ್ಕಾರದ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಹಾಲಿನ ದರ ಹೆಚ್ಚಿಸಬೇಕು. ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಹೆಚ್ಚಿಸಿ ನೆರವಾಗಿದ್ದರು. ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಕೂಡ ಪ್ರೋತ್ಸಾಹ ಧನ ಏರಿಕೆ ಮಾಡಿ ಅನ್ನದಾತರಿಗೆ ನೆರವು ನೀಡಬೇಕು. ಇಲ್ಲವಾದಲ್ಲಿ ರೈತ ಸಂಘಟನೆ ನೇತೃತ್ವದಲ್ಲಿ ಬೃಹತ್​ ಹೋರಾಟ ನಡೆಸಲಾಗುವುದು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ, ಹಸು ಸಾಕಿ ನಾವು ಬದುಕುವ ಬದಲು ಹಸುವನ್ನು ಸಾಕಲು ನಾವು ಬದುಕುವಂತಾಗಿದೆ. ಬರಗಾಲದ ಎಚ್ಚರಿಕೆ ಇರುವುದರಿಂದ ಹೈನುಗಾರರಿಗೆ ಹಾಲಿನ ದರವನ್ನು ಕನಿಷ್ಠ 10 ರೂ.ವನ್ನಾದರೂ ಏರಿಕೆ ಮಾಡಬೇಕೆಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net