

ಕನಕಪುರ:
ತಾಲೂಕಿನ ಹೆಗ್ಗನೂರು ಗ್ರಾಮದ ಸಮೀಪ ಸಂಗಮ&ಮೇಕೆದಾಟು ಮುಖ್ಯರಸ್ತೆಯಲ್ಲಿರುವ ಕಾವೇರಿ ವನ್ಯಜಿವಿಧಾಮದ ಅರಣ್ಯ ಇಲಾಖೆ ಚೆಕ್ಪೋಸ್ಟ್ ಬಳಿ ಮಂಗಳವಾರ ಮಧ್ಯಾಹ್ನ ಕಾಡಾನೆಯೊಂದು ತನ್ನ ಮರಿಯೊಂದಿಗೆ ನೀರು ಕುಡಿಯುವ ದೃಶ್ಯ ಸ್ಥಳಿಯರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಗಮನ ಸೆಳೆಯಿತು.
ಈ ಬಾರಿ ಸಮರ್ಪಕ ಮುಂಗಾರು ಮಳೆಯ ಕೊರತೆಯಿಂದ ಅರಣ್ಯ ಪ್ರದೇಶದಲ್ಲಿ ನೀರಿನ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಕಾಡಾನೆಯೊಂದು ಬಾಯಾರಿಕೆಯಾಗಿ ತನ್ನ ಮರಿಯೊಂದಿಗೆ ಅರಣ್ಯ ಇಲಾಖೆ ನಿರ್ಮಿಸಿರುವ ನೀರಿನ ಸಂಗ್ರಹ ತೊಟ್ಟಿಗೆ ಬಂದು ದಾಹ ನೀಗಿಸಿಕೊಂಡ ಅಪರೂಪದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.