

ಕಳೆದ ಹಲವು ದಿನಗಳಿಂದ ಟೊಮ್ಯಾಟೊ ಹಾಗೂ ಇತರ ತರಕಾರಿ ಬೆಲೆ ಇಳಿಕೆ ಕಾಣುತ್ತಿದೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್ ಸಿಗದೆ ಹೋಟೆಲ್ ಬಂದ್ ಆಗಿರುವ ಜತೆಗೆ ಮದುವೆ, ಸಮಾರಂಭಗಳು ಹೆಚ್ಚು ನಡೆಯದಿರುವುದು ದಿಢೀರ್ ಬೆಲೆ ಕುಸಿತಕ್ಕೆ ಕಾರಣ. ಕಾರಣ ಏನೇ ಇದ್ದರೂ ಟೊಮ್ಯಾಟೊ ಬೆಳೆದವರು ಸಂಕಷ್ಟಕ್ಕೆ ಸಿಲುಕಿದ್ದು, ಮಾರುಕಟ್ಟೆಗೆ ತರುವ ಕೂಲಿ ಕೊಡಲೂ ಸಾಧ್ಯವಾಗದೆ ಹತಾಸೆಯಿಂದ ರಸ್ತೆ ಪಕ್ಕ ಟೊಮ್ಯಾಟೊ ಸುರಿದು ಹೋಗುತ್ತಿದ್ದಾರೆ.