ಅಪಘಾತದಲ್ಲಿ ಕೂಲಿ ಕಾರ್ಮಿಕ ಸಾವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಕುದೂರು: ಕುದೂರು&ಶಿವಗಂಗೆ ಮುಖ್ಯರಸ್ತೆಯ ತೊರೆರಾಮನಹಳ್ಳಿ ಬಳಿ ದ್ವಿಚಕ್ರ ವಾಹನಕ್ಕೆ ಬೊಲೆರೋ ಪಿಕಪ್​ ವಾಹನ ಡಿಕ್ಕಿಯಾಗಿ ಕೂಲಿ ಕಾರ್ಮಿಕ, ತೊರೆರಾಮನಹಳ್ಳಿ ನಿವಾಸಿ (42) ನಾಗರಾಜು ಬುಧವಾರ ರಾತ್ರಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಅಪಘಾತ ಮಾಡಿದ ವಾಹನ ಚಾಲಕ ಪರಾರಿಯಾಗಿದ್ದಾನೆ. ಕುದೂರು ಕಡೆಯಿಂದ ದಾಬಸ್​ಪೇಟೆ ಕಡೆಗೆ ವೇಗವಾಗಿ ಬಂದ ಪಿಕಪ್​ ವಾಹನ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ನಾಗರಾಜು ಓಡಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net