

ರಾಮನಗರ
ಮುಖ್ಯಮಂತ್ರಿಗಳು ಯಾವಾಗಲೂ 60:40, 35:65, 50:50, ಅಂತ ರೇಶಿಯೋ ಲೆಕ್ಕಾಚಾರದಲ್ಲಿ ಮಾತಾನಾಡುತ್ತಿದ್ದಾರೆ. ಇವರು ನಾಡಿನ ಮುಖ್ಯಮಂತ್ರಿನಾ, ಇಲ್ಲಾ ರಿಯಲ್ ಎಸ್ಟೇಟ್ ಕಂಪನಿ ಸಿಇಓನಾ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಜೆಡಿಎಸ್ ಯುವಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬಿಡದಿ ಸಮಗ್ರ ಉಪನಗರ ಯೋಜನೆ ಕೈ ಬಿಡಲು ಆಗ್ರಹಿಸಿ ಬೈರಮಂಗಲ ಗ್ರಾಮದಲ್ಲಿ ರೈತರು ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದರು. ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಸಚಿವರು ನಿಮ್ಮ ಸಮಸ್ಯೆ ಆಲಿಸಲು ಬರಲಿಲ್ಲ. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಮೂರುವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ರೈತನ ಪರಿಸ್ಥಿತಿ ಆಲಿಸಲು ಸರ್ಕಾರ ಮುಂದಾಗಿಲ್ಲ ಟೀಕಿಸಿದರು.
ರಾಜ್ಯದಲ್ಲಿ ಬರಗಾಲ ಇದೆ. ಈ ಹಿಂದೆ ಕುಮಾರಸ್ವಾಮಿ ಅವರು ರೈತರ ಕಷ್ಟ ನೋಡಿ ಸಾಲಮನ್ನಾ ಮಾಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಸಾಲಾ ಮನ್ನಾ ಮಾಡಿದಾಗ ಇದು ರಾಹುಲ್ ಗಾಂಧಿ ಕನಸು ಅಂತ ಡಿಕೆಶಿ ಹೇಳಿದ್ದರು. ಇದೀಗ ಈಗ ರೈತರ ಸಾಲಮನ್ನಾ ಮಾಡಲಿ. ಈ ಬಗ್ಗೆ ಅವರ ನಾಯಕರಾದ ರಾಹುಲ್ ಗಾಂಧಿ ಹೇಳಲಿಲ್ಲವಾ ಎಂದು ಕುಟುಕಿದರು.
ಅಧಿವೇಶನದಲ್ಲಿ ಟೌನ್ಶಿಪ್ ವಿಚಾರದ ಬಗ್ಗೆ ಚರ್ಚೆ ಮಾಡಲು ಸರ್ಕಾರ ಸಮಯ ಕೊಡಲಿಲ್ಲ. ಯೋಜನೆ ಕೈ ಬಿಡುವ ಮನಸ್ಸಿನಲ್ಲಿ ಸರ್ಕಾರ ಇಲ್ಲ. ಕಾನೂನು ಹೋರಾಟ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಪರ ಇರುವ ಅಡ್ವಿಕೇಟ್ ಜನರಲ್ ಅವರು ಆೇಪಣೆ ಹಾಕಲು ತಡ ಮಾಡಿ ಕಾನೂನು ಹೋರಾಟದ ವೇಗವನ್ನು ಕಡಿಮೆ ಮಾಡುತ್ತಿದೆ ಎಂದು ಹೇಳಿದರು.
29 ರಂದು ಹೈಕೋರ್ಟ್ನಲ್ಲಿ ಟೌನ್ಶಿಪ್ ವಿಚಾರವಾಗಿ ವಿಚಾರಣಿ ಇದ್ದು, ನ್ಯಾಯಾಲಯಕ್ಕೆ ಹೆದರಿ ಜಿಲ್ಲಾಧಿಕಾರಿಗಳು ತರಾತುರಿಯಲ್ಲಿ ರಾತ್ರಿ ಬಂದು ಹೋಗಿದ್ದಾರೆ. ಕಾನೂನು ಹೋರಾಟದಲ್ಲಿ ನಿಮಗೆ ಜಯ ಸಿಗುತ್ತದೆ. ಸಂಪೂರ್ಣ ಯೋಜನೆಗೆ ತಡೆಯಾೆ ಸಿಗುವ ಸಾಧ್ಯತೆ ಇದೆ. ಜಿಬಿಡಿಎ ಬಳಿ ಹಣವೇ ಇಲ್ಲ. ಹುಡ್ಕೋದಿಂದ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಇಲ್ಲಿಯವರೆಗೂ ಎಷ್ಟು ಜನಕ್ಕೆ ಪರಿಹಾರ ನೀಡಿದ್ದೀರಿ ಎಂದು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ರೈತರ ಭೂಮಿ ಉಳಿಸಲು ಜೈಲಿಗೆ ಹೋಗಲಿಕ್ಕೂ ತಯಾರಾಗಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರೈತರಿಗೆ ಸಂದೇಶ ನೀಡಿದರು. ಹೋರಾಟಕ್ಕೆ ದೇವೇಗೌಡರು ಬರಲೇಬೇಕೆಂದು ರೈತರು ಪಟ್ಟು ಹಿಡಿದ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ದೇವೇಗೌಡರಿಗೆ ವಿಡಿಯೋ ಕರೆ ಮಾಡಿ ಮಾತನಾಡಿಸಿದರು. ಉಪವಾಸ ನಿರತ ರೈತರ ಆರೋಗ್ಯ ವಿಚಾರಿಸಿ ಮಾತನಾಡಿದ ದೇವೇಗೌಡರು ನಿಮ್ಮ ಭೂಮಿ ಉಳಿಸಲು ಯಾವುದೇ ತ್ಯಾಗಕ್ಕೂ ಸಿದ್ಧ ಹೆದರಬೇಡಿ. ವಿಧಾನಸೌಧ ಹಾಗೂ ದೆಹಲಿಯಲ್ಲೂ ಹೋರಾಟ ಮಾಡುವ ಅಭಯ ನೀಡಿದರು. ಅಂತಿಮವಾಗಿ ಭಾನುವಾರ ಬೈರಮಂಗಲ ಗ್ರಾಮಕ್ಕೆ ದೇವೇಗೌಡರನ್ನು ಕರೆದುಕೊಂಡು ಬರಲಾಗುವುದೆಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಮಾಜಿ ಶಾಸಕ ಎ.ಮಂಜುನಾಥ್, ಹೋರಾಟ ಸಮಿತಿಯ ಅಧ್ಯಕ್ಷ ರಾಮಯ್ಯ, ಪ್ರಧಾನ ಕಾರ್ಯದರ್ಶಿ ಶೀನಪ್ಪರೆಡ್ಡಿ, ಖಜಾಂಚಿ ನಾಗರಾಜು, ಅಶ್ವತ್ಥ್, ಭಾಗ್ಯಮ್ಮ, ಜಯಮ್ಮ ಸೇರಿ ಹಲವರು ಉಪಸ್ಥಿತರಿದ್ದರು.