ಗಣತಿಗಾಗಿ ಬೆಳಗ್ಗೆಯೇ ಮನೆಗಳಿಗೆ ಹೋದಾಗ ಕುಟುಂಬದ ಸದಸ್ಯರೆಲ್ಲರೂ ಸಿಗುತ್ತಿದ್ದರು. ಮಧ್ಯಾಹ್ನ 12 ರವರೆಗೆ ಗಣತಿ ಮುಗಿಸಿ ಊಟಕ್ಕೆ ವಿರಾಮ ತೆಗೆದುಕೊಳ್ಳುತ್ತಿದ್ದೆ. ನಂತರ ಮಧ್ಯಾಹ್ನ 2 ರಿಂದ ರಾತ್ರಿ 8ರವರೆಗೆ ಗಣತಿ ಮಾಡುತ್ತಿದ್ದೆ. ಈ ಅವಧಿಯಲ್ಲಿ ಬೀಗ ಹಾಕಿರುತ್ತಿದ್ದ ಮನೆಯವರು ಯಾವಾಗ ಸಿಗುತ್ತಾರೆ ಎಂಬುದನ್ನು ತಿಳಿದುಕೊಂಡು, ಅವರಿದ್ದಾಗಲೇ ಬಂದು ವಿವರ ಕಲೆ ಹಾಕುತ್ತಿದ್ದೆ ಎಂದು ಹೇಳಿದರು.