ಕುದೂರು ಹೋಬಳಿಯ ಶ್ರೀಗಿರಿಪುರ ಗ್ರಾಪಂ ಸದಸ್ಯ ವಿನಯ್ ಅವರ ಪುತ್ರರಾಗಿರುವ ಸೂರ್ಯ ಬೈಕ್ ರೇಸ್ ತರಬೇತುದಾರ ಅರುಣ್ ಬಳಿ ತರಬೇತಿ ಪಡೆಯುತ್ತಿದ್ದಾನೆ. ಮಗನ ಬೈಕ್ ಬಗೆಗಿನ ಆಸಕ್ತಿ ಗುರುತಿಸಿ, ಅಭ್ಯಾಸಕ್ಕಾಗಿ ತಮ್ಮ ಹೊಲದಲ್ಲೆ ಟ್ರ್ಯಾಕ್ ನಿರ್ಮಿಸಿ ಕೊಟ್ಟಿದ್ದಾರೆ. ನಿತ್ಯ ಸಂಜೆ ಎರಡು ಗಂಟೆ ತರಬೇತಿ ನೀಡಲಾಗುತ್ತದೆ. ಅಕ್ಟೋಬರ್ನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಬೈಕ್ ರ್ಯಾಲಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಬಾಲಕನ ಸಾಧನೆ ಗುರುತಿಸಿ ಶಾಸಕ ಬಾಲಕೃಷ್ಣ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.