ಹಾರೋಹಳ್ಳಿ ತಾಲೂಕಿನಲ್ಲಿ ಬಿತ್ತನೆ ಬಿರುಸು

ಹಾರೋಹಳ್ಳಿ ತಾಲೂಕಿನ ಹಾರೋಹಳ್ಳಿ ಮರಳವಾಡಿ ರಸ್ತೆಯ ಬಾದಗೆರೆ ಗ್ರಾಮದ ಬಳಿ ಬಿತ್ತನೆ ಕಾರ್ಯದಲ್ಲಿ ತೊಡಗಿರುವ ರೈತರು.
ಹಾರೋಹಳ್ಳಿ ತಾಲೂಕಿನ ಹಾರೋಹಳ್ಳಿ ಮರಳವಾಡಿ ರಸ್ತೆಯ ಬಾದಗೆರೆ ಗ್ರಾಮದ ಬಳಿ ಬಿತ್ತನೆ ಕಾರ್ಯದಲ್ಲಿ ತೊಡಗಿರುವ ರೈತರು.
Published on

ಹಾರೋಹಳ್ಳಿ:

ತಾಲೂಕಿನಾದ್ಯಂತ ರಾಗಿ ಬಿತ್ತನೆ ಬಿರುಸಿನಿಂದ ಸಾಗಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ಬಹುತೇಕ ಕಡಿಮೆ ಬಿತ್ತನೆ ನಡೆದಿದೆ.

ಸಾಂಪ್ರದಾಯಿಕವಾಗಿ ಜುಲೈನಲ್ಲಿ ಪೂರ್ಣಗೊಳ್ಳಬೇಕಿದ್ದ ಬಿತ್ತನೆ ಆಗಸ್ಟ್​ನಲ್ಲೂ ತಡವಾಗಿ ಸಾಗುತ್ತಿದೆ. ಈ ಬಾರಿ ಕೇವಲ ಶೇ.17 ಮಾತ್ರ ತಾಲೂಕಿನಾದ್ಯಂತ ಬಿತ್ತನೆ ಕಾರ್ಯ ನಡೆದಿದೆ. ಮುಂಬರುವ ದಿನಗಳಲ್ಲಿ ಭೀಕರ ಬರಗಾಲ ಸೃಷ್ಟಿಯಾಗುವ ಭೀತಿ ಹುಟ್ಟುಹಾಕಿದೆ.
ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿ ಸೇರಿ 10300 ಹೆಕ್ಟೆರ್​ ಕೃಷಿ ಜಮೀನು ಹೊಂದಿದ್ದು, ಅದರಲ್ಲಿ ಕೇವಲ 1700& 1800 ಎಕರೆ ಕೃಷಿ ಭೂಮಿಯಲ್ಲಿ ಬಿತ್ತನೆ ಆಗಿದೆ.

ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಯೂರಿಯಾ, ರಸಗೊಬ್ಬರಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದರೂ ಮಳೆಯ ಅನಿಶ್ಚಿತತೆಯಿಂದಾಗಿ ಕೃಷಿಕರು ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.

"

ಹಾರೋಹಳ್ಳಿ ತಾಲೂಕಿನಾದ್ಯಂತ ಶೇ.17 ಬಿತ್ತನೆ ನಡೆದಿದೆ. ವಾಡಿಕೆಯಷ್ಟು ಮಳೆ ಇಲ್ಲದೆ ಬಿತ್ತನೆ ವಿಳಂಬವಾಗಿದ್ದು, ರೈತರಿಗೆ ಬೇಕಾಗಿರುವ ಎಲ್ಲ ರೀತಿಯ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ರಸಗೊಬ್ಬರ ಬಿತ್ತನೆ ಬೀಜ ಕೊರತೆ ಇರುವುದಿಲ್ಲ. ಆದರೆ ಮಳೆ ಇಲ್ಲದೆ ರೈತರಿಗೆ ಅನಾನುಕೂಲವಾಗಿದೆ.

— > ರಾಧಾಕೃಷ್ಣ, ಸಹಾಯಕ ಕೃಷಿ ನಿರ್ದೇಶಕರು ಕನಕಪುರ

"

ಸರಿಯಾಗಿ ಮಳೆ ಬೀಳದೆ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಜಮೀನು ಹದ ಮಾಡಿಕೊಂಡಿದ್ದು, ಮಳೆಗಾಗಿ ಕಾಯುತ್ತಿದ್ದೇವೆ. ಮಳೆ ಕೃಪೆ ತೋರಿದರೆ ಬಿತ್ತನೆ ಸಾಧ್ಯವಾಗುತ್ತದೆ. ಮಳೆ ಇಲ್ಲದೆ ತೊಂದರೆಯಾಗುತ್ತಿದೆ. ಜಾನುವಾರುಗಳಿಗೂ ಮೇವಿನ ಕೊರತೆ ಕಾಡುತ್ತಿದೆ.

— > ಬಸವರಾಜು ರೈತ ಕಲ್ಲನಕುಪ್ಪೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net