ನ್ಯಾನೋ ಯೂರಿಯಾ ಉತ್ತೇಜಿಸಿ ಡಾ.ಸಿ.ಎನ್.ಮಂಜುನಾಥ್

ರಾಮನಗರದಲ್ಲಿ ದಿಶಾ ಸಭೆ ನಡೆಸಿದ ಸಂಸದ ಡಾ.ಸಿ.ಎನ್.ಮಂಜುನಾಥ್.
ರಾಮನಗರದಲ್ಲಿ ದಿಶಾ ಸಭೆ ನಡೆಸಿದ ಸಂಸದ ಡಾ.ಸಿ.ಎನ್.ಮಂಜುನಾಥ್.
Published on

ಪ್ರಮುಖ ಮುಖ್ಯಾಂಶಗಳು

  • ರಾಮನಗರದಲ್ಲಿ ದಿಶಾ ಸಮಿತಿ ಸಭೆ
  • ಸಂಸದ ಡಾ.ಸಿ.ಎನ್. ಮಂಜುನಾಥ್ ನೇತೃತ್ವದ ಸಭೆ
  • ನ್ಯಾನೋ ಯುರಿಯಾ ಬಳಸಲು ಉತ್ತೇಜಿಸಲು ಕರೆ
ರಾಮನಗರ: ಮಣ್ಣು, ಜಲ, ವಾಯು ವಾಲಿನ್ಯ ತಡೆಯಲು ಕೃಷಿಯಲ್ಲಿ ಮಹತ್ವದ ಪಾತ್ರ ವಹಿಸುವ ನ್ಯಾನೋ ಯೂರಿಯಾವನ್ನು ಜಿಲ್ಲೆಯ ರೈತರು ಬಳಸಲು ಉತ್ತೇಜಿಸುವ ಕೆಲಸವನ್ನು ಕೃಷಿ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ Aಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು.
500 ಮಿಲೀ ನ್ಯಾನೋ ಯೂರಿಯಾ 45 ಕೆ.ಜಿ.ಯ ನ ಯೂರಿಯಾಕ್ಕೆ ಸಮ. ಅದನ್ನು ಕೊಂಡೊಯ್ಯುವುದು ಅತ್ಯಂತ ಸುಲಭ, ರೈತರು ಅವುಗಳನ್ನು ಸಲೀಸಾಗಿ ಬಳಸಬಹುದು. ಜತೆಗೆ ನ್ಯಾಯೋ ಯೂರಿಯಾ ಭೂಮಿ, ವಾಯು ಮತ್ತು ಜಲಕ್ಕೆ ಕಂಟಕವಲ್ಲ. ಈ ಹಿನ್ನೆಲೆಯಲ್ಲಿ ಅದರ ಪ್ರಾಮುಖ್ಯತೆ, ಬಳಕೆ ವಿಧಾನದ ಕುರಿತು ಕಾರ್ಯಾಗಾರಗಳು, ಕರಪತ್ರಗಳು, ಪೋಸ್ಟರ್‌ಗಳ ಮೂಲಕ ಹೆಚ್ಚಿನ ಅರಿವು ಮೂಡಿಸಬೇಕು.
ಕೇಂದ್ರ ಸರ್ಕಾರವು ಯೂರಿಯಾ ಗೊಬ್ಬರಕ್ಕೆ 1.1ಲಕ್ಷ ಕೋಟಿ ರೂ.ಗಳ ಸಬ್ಸಿಡಿ ನೀಡುತ್ತಿದೆ, ರಸಗೊಬ್ಬರಗಳೆಲ್ಲಾ ಸೇರಿದಂತೆ ಒಟ್ಟಾರೆ 1.7 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಾತನಾಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಪ್ರತಿ ತಿಂಗಳು 1500 ಲೀಟರ್‌ಗಳಷ್ಟು ನ್ಯಾನೋ ಯೂರಿಯಾ ಜಿಲ್ಲೆಯಲ್ಲಿ ಬಳಕೆಯಾಗುತ್ತಿದೆ, ಅದರ ಬಳಕೆ ಪ್ರವಾಣವನ್ನು ಹೆಚ್ಚಿಸಲು ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ತೆಂಗನ್ನು ವಿಮೆ ವ್ಯಾಪ್ತಿಗೆ ತನ್ನಿ

ತೆಂಗು ಬೆಳೆಗೆ ವಿಮೆ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕು, ಅದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಶ್ರಮಿಸಲಾಗುವುದು ಎಂದರು. ತೆಂಗಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪದ್ದತಿ ಜಾರಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಕ್ರಮಗಳೇನು ಎಂದು ಸಂಸದರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ರಾಜ್ಯ ಸರ್ಕಾರದ ತೆಂಗು ಅಭಿವೃದ್ದಿ ಮಂಡಳಿ ಈ ಪ್ರಸ್ತಾವನೆಯನ್ನು ಅನುಮೂದಿಸಿ ಕೇಂದ್ರಕ್ಕೆ ಕಳುಹಿಸಿದ್ದಲ್ಲೀ ಕೇಂದ್ರ ಸರ್ಕಾರ ಪರಿಶೀಲಿಸಿ ಮುಂದಿನ ಕ್ರಮವಹಿಸಲಿದೆ ಎಂದರು.

ಗುತ್ತಿಗೆದಾರರಿಗೆ ದಂಡ ವಿಧಿಸಿ

ಜಲ್ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಜಿಲ್ಲೆಯ 1,528 ಕಾಮಗಾರಿಗಳ ಪೈಕಿ 895 ಕಾಮಗಾರಿಗಳು ಪೂರ್ಣಗೊಂಡಿವೆ. 556 ಕಾಮಗಾರಿಗಳು ಪ್ರಕ್ರಿಯೆಯಲ್ಲಿದ್ದು, ಬಾಕಿ ಉಳಿದವುಗಳನ್ನು ಆದಷ್ಟು ಶ್ರೀವಾಗಿ ಪೂರ್ಣಗೊಳಿಸಬೇಕು ಇಲ್ಲಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಬೇಕು, ತಪ್ಪಿದ್ದಲ್ಲಿ ಅವರ ವಿರುದ್ಧ ದಂಡ ವಿಧಿಸಬೇಕು ಸೂಚಿಸಿದ ಅವರು ಜೆಜೆಎಂ ಕಾಮಗಾರಿಗಳ ಕುರಿತು ಚರ್ಚಿಸಲು 10 ದಿನದೊಳಗೆ ಪಿಡಿಓ ಹಾಗೂ ಗುತ್ತಿಗೆದಾರರ ಸಭೆ ಕರೆಯಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಅವರಿಗೆ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್, ಉಪ ವಿಭಾಗಾಧಿಕಾರಿ ಬಿನೋಯ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಧನರಾಜ್, ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ವೇದಿಕೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net