ರೈತರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿದ ಪೊಲೀಸರು

ಬಿಡದಿ ಟೌನ್ ಷಿಪ್ ವಿರೋಧಿಸಿ ರೈತರ ಹೋರಾಟ ರಸ್ತೆ ತಡೆದ ರೈತರ ವಿರುದ್ಧ ಸ್ವಯಂ ಪ್ರಕರಣ ದಾಖಲು 15 ಮಂದಿ ವಿರುದ್ಧ ಪ್ರಕರಣ
bidadi township
ಬಿಡದಿ ರೈತರನ್ನು ಬಂಧಿಸುತ್ತಿರುವ ಪೊಲೀಸರು.(ಸಂಗ್ರಹ ಚಿತ್ರ)
Published on: 

 ರಾಮನಗರ: ಬೈರಮಂಗಲ ಗ್ರಾಮದಲ್ಲಿ ರಸ್ತೆ ತಡೆದು ಉಪವಾಸ ಸತ್ಯಾಗ್ರಹ ನಡೆಸಿದ್ದ ಹಲವು ರೈತರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ.

ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ, ಉದ್ಯೋಗಿಗಳಿಗೆ, ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಬಿಡದಿ ಠಾಣೆ ಪಿಎಸ್ಐ ದೇವರಾಜು ಅವರು 15 ಮಂದಿ ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ.

ಪ್ರತಿಭಟನಾ ನಿರತ ರೈತರಾದ ಗಿರೀಶ್, ಚೇತನ್, ಚಂದ್ರಶೇಖರ್, ನಾಗೇಶ್, ಶಿವರುದ್ರಪ್ಪ, ವಿರೇಶ್, ಪುಟ್ಟಸ್ವಾಮಯ್ಯ, ಬೈರಪ್ಪ, ಕೃಷ್ಣಪ್ಪ, ನಾಗರಾಜು, ಜಯಮ್ಮ, ಜಯಲಕ್ಷ್ಮಿ, ಶ್ವೇತಾ, ಭಾಗ್ಯ, ನೇತ್ರಾ ವಿರುದ್ಧ ದೂರು ನೀಡಲಾಗಿದೆ.

ಈ‌‌ ಸಂಬಂಧ ಶನಿವಾರ ಸಂಜೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net