ಮಾಗಡಿ, ರಾಮನಗರ ಬರ ಪೀಡಿತ ತಾಲೂಕುಗಳು

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ 2 ತಾಲೂಕುಗಳು ಬರ ಪೀಡಿತ
  • ರಾಜ್ಯ ಸರ್ಕಾರ ಘೋಷಣೆ
  • 30989 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ
ರಾಮನಗರ
ತೀವ್ರ ಮಳೆಯ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದ್ದು, ಜಿಲ್ಲೆಯ ಎರಡು ತಾಲೂಕುಗಳು ಬರ ಪೀಡಿತ ಎಂದು ಘೋಷಿಸಿದೆ.
ಈ ಬಾರಿ ಮುಂಗಾರು ಕೈಕೊಟ್ಟ ಕಾರಣದಿಂದ ಜಿಲ್ಲೆಯಲ್ಲಿ ಬಿತ್ತನೆ ಕುಂಠಿತ ಆಗಿರುವ ಜತೆಗೆ, ಕೆಲವು ಕಡೆಗಳಲ್ಲಿ ಬಿತ್ತನೆ ಮಾಡಲಾಗಿದ್ದ ಬೆಳೆಗಳೂ ಮಳೆ ಕೊರತೆಯಿಂದಾಗಿ ಮಣ್ಣು ಸೇರಿವೆ. ಇದೀಗ ಸರ್ಕಾರ ಬರ ಪೀಡಿತ ಎಂದು ಬೆಂಗಳೂರು ದಣ ಜಿಲ್ಲೆಯ ಮಾಗಡಿ ಮತ್ತು ರಾಮನಗರ ತಾಲೂಕುಗಳನ್ನು ಘೋಷಿಸಲಾಗಿದ್ದು, ಉಳಿದ ಮೂರು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡದೇ ಇರುವುದಕ್ಕೂ ಆ ಭಾಗದ ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮಾನದಂಡ ಏನು?:

ಸರ್ಕಾರ ಬರ ಘೋಷಣೆ ಮಾಡಲು ಮಳೆ ಕೊರತೆ ಮಾನದಂಡವನ್ನು ಅನುಸರಿಸಿದೆ. ಕೆಎಸ್​ಎನ್​ಎಂಡಿಸಿ ನೀಡುವ ಮಳೆ ವರದಿ ಆಧರಿಸಿ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಸತತ ಮೂರು ವಾರ ಮಳೆ ಕೊರತೆ ಎದುರಿಸಿದ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮಾಗಡಿ ಮತ್ತು ರಾಮನಗರವನ್ನು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಸತತವಾಗಿ ಮೂರು ವಾರ ಮಳೆ ಕೊರತೆ ದಾಖಲಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಹಾರೋಹಳ್ಳಿ, ಚನ್ನಪಟ್ಟಣ ಮತ್ತು ಕನಕಪುರ ತಾಲೂಕುಗಳನ್ನೂ ಬರ ಪೀಡಿತ ಎಂದು ಘೋಷಣೆ ಮಾಡುವಂತೆ ಮನವಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ನಿರ್ವಹಣೆಗೆ ಕೊರತೆ ಇಲ್ಲ

ಬೆಂಗಳೂರು ದಣ ಜಿಲ್ಲೆ ಬರ ಎದುರಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಲ್ಲದೆ, ಇದಕ್ಕೆ ಬೇಕಾದ ಹಣದ ಕೊರತೆಯೂ ಜಿಲಾಡಳಿತಕ್ಕೆ ಇಲ್ಲ. ಬೆಳೆ ನಷ್ಟಗಳ ಸಮೀೆ ಹಾಗೂ ಅಂದಾಜು, ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳು ಮತ್ತು ನಗರ ಸ್ಥಳಿಯ ಸಂಸ್ಥೆಗಳ ವಾರ್ಡ್​ಗಳ ಪಟ್ಟಿ ಹಾಗೂ ಮೇವು ಕೊರತೆ, ದಾಸ್ತಾನು ಮತ್ತು ಗೋಶಾಲೆಗಳ ಆರಂಭ ಕುರಿತಂತೆ ಸಿದ್ಧತೆಯನ್ನು ಮಾಡಿಕೊಳ್ಳಬೇಕಿದೆ. ಸರ್ಕಾರ ಎರಡು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೇ ಮಾಡಿರುವ ಹಿನ್ನೆಲೆಯಲ್ಲಿ ಪ್ರಾಕೃತಿಕ ವಿಕೋಪ ನಿಧಿಯಡಿಯಲ್ಲಿ ಲಭ್ಯವಿರುವ ಹಣವನ್ನು ಬಳಕೆ ಮಾಡಿಕೊಂಡು ತಕ್ಷಣವೇ ಜಿಲ್ಲಾಢಳಿತ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.

ಮಳೆ ಕೈಕೊಟ್ಟರೆ ಮತ್ತಷ್ಟು ಸಂಕಷ್ಟ

ಜಿಲ್ಲೆಯಲ್ಲಿ ಈ ಬಾರಿ ಒಟ್ಟು 80,758 ಹೆಕ್ಟೇರ್​ ಪ್ರದೇಶದ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ ಹೆಚ್ಚಿನ ಪ್ರದೇಶ ರಾಗಿ ಆಕ್ರಮಿಸಿದೆ. ಜಿಲ್ಲೆಯಲ್ಲಿ ರಾಗಿಯನ್ನು ಒಟ್ಟು 65000 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿದೆ. ಆದರೆ, ಒಟ್ಟಾರೆ ಬಿತ್ತನೆ ಪ್ರದೇಶದಲ್ಲಿ ಈವರೆವಿಗೂ 30989 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಇದರಲ್ಲಿ ರಾಗಿ, ಎಳ್ಳು, ಅಲಸಂದೆ, ತೊಗರಿ, ಹುರುಳಿ, ಅವರೆ ಮತ್ತು ನೆಲಗಡಲೆ ಸೇರಿದೆ. ಆದರೆ, ಹೆಚ್ಚಿನ ಪ್ರದೇಶ ಮಳೆ ಆಶ್ರಿತವಾಗಿದ್ದು, ಭವಿಷ್ಯದಲ್ಲಿ ಮಳೆ ಕೈಕೊಟ್ಟರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
ಆಗಸ್ಟ್​ನಲ್ಲಿ ಶೇ.22 ಮಳೆ ಕೊರತೆ
ಈ ಬಾರಿ ಮುಂಗಾರು ಸಂರ್ಪೂವಾಗಿ ಕೈಕೊಟ್ಟಿದೆ. ಇದರ ಪರಿಣಾಮ ಸೂಕ್ತ ಸಂದರ್ಭದಲ್ಲಿ ಬಿತ್ತನೆ ಕಾರ್ಯವೂ ನಡೆದಿರಲಿಲ್ಲ. ಆಗಸ್ಟ್​ನಲ್ಲಿ ಒಟ್ಟಾರೆ ಶೇ.22 ಮಳೆ ಕೊರತೆಯಾಗಿದೆ. ಎದುರಾಗಿದೆ. ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ ಶೇ.30 ಮಳೆ ಕೊರತೆ ಆಗಿದೆ. ಆದರೆ, ಹೆಚ್ಚಿನ ಪ್ರಮಾಣದ ಮಳೆ ಕೊರತೆ ಆಗಿದ್ದು, ಬಿತ್ತನೆ ಸಮಯವಾದ ಜುಲೈ ತಿಂಗಳಲ್ಲಿ ಒಟ್ಟಾರೆ ಶೇ.78 ಮಳೆ ಕೊರತೆ ಆಗಿದೆ. ವಾಡಿಕೆಯಂತೆ ಜುಲೈನಲ್ಲಿ ಒಟ್ಟು 82.8 ಮಿಮೀ ಮಳೆ ಆಗಬೇಕಿತ್ತು. ಆದರೆ, ಬಿದ್ದಿದ್ದು ಮಾತ್ರ 18.4 ಮಿ ಮೀ ಮಾತ್ರ. ಆಗಸ್ಟ್​ನಲ್ಲಿ ಕೊರತೆ ಪ್ರಮಾಣ ಕಡಿಮೆ ಆಗಿದೆ.
===
ಬರ ಪೀಡಿತ ತಾಲೂಕುಗಳ ಘೋಷಣೆ ಮಾಡಿರುವುದು ಸಂತಸದ ವಿಚಾರ. ಜಿಲ್ಲೆಯಲ್ಲಿ ಕೇವಲ ಎರಡು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡಿರುವುದು ಸರಿಯಲ್ಲ. ಜಿಲ್ಲೆಯ ಸಂಪೂರ್ಣವಾಗಿ ಮಳೆ ಕೊರತೆಯನ್ನು ಎದುರಿಸುತ್ತಿದೆ. ಸರ್ಕಾರ ಕೂಡಲೇ ಉಳಿದ ತಾಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಬೇಕು.
> ಸಿ.ಪುಟ್ಟಸ್ವಾಮಿ, ರೈತ ಮುಖಂಡ, ಚನ್ನಪಟ್ಟಣ
ಸರ್ಕಾರ ಜಿಲ್ಲೆಯ ಎರಡು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿವೆ. ಉಳಿದ ಮೂರು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲಾಗುವುದು.
> ಯಶವಂತ್​ ವಿ.ಗುರುಕರ್​,
ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ.
ಜೂ.1ರಿಂದ ಆ.27ರವರೆಗಿನ ಮಳೆ ಪ್ರಮಾಣ (ಮಿಮಿಗಳಲ್ಲಿ)
ತಾಲೂಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net