ಹುಲಿಕಲ್ ಗ್ರಾಮದಲ್ಲಿ ನಿವೇಶನ ಕೊಡಿ

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ
Published on

ಪ್ರಮುಖ ಮುಖ್ಯಾಂಶಗಳು

  • ಸಾಲುಮರದ ತಿಮ್ಮಕ್ಕ ಅವರ ಸ್ವಗ್ರಾಮ
  • ನಿವೇಶನವಿಲ್ಲದ ಎಸ್ಸಿ ಎಸ್ಟಿ ಸಮೂದಾಯ
  • ಜಿಲ್ಲಾಧಿಕಾರಿ ಖಡತ್ ಎಚ್ಚರಿಕೆ

ರಾಮನಗರ: ಪರಿಸರ ರಾಯಭಾರಿ ದಿವಂಗತ ಸಾಲುಮರದ ತಿಮ್ಮಕ್ಕ ಅವರು ವಾಸವಿದ್ದಮಾಗಡಿ ತಾಲೂಕಿನ ಹುಲಿಕಲ್​ ಗ್ರಾಮದಲ್ಲಿ ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆಆಶ್ರಯ ಯೋಜನೆಯಡಿ ನಿವೇಶನ ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆಜಿಲ್ಲಾಧಿಕಾರಿ ಯಶವಂತ್​ ವಿ. ಗುರುಕರ್​ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಜಾಗೃತಿಮತ್ತು ಉಸ್ತುವಾರಿ ಸಮಿತಿ (ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ದೌರ್ಜನ್ಯ ಪ್ರತಿಬಂಧ) ತಿದ್ದುಪಡಿಕಾಯ್ದೆ &2015ರ ಅನುಷ್ಠಾನ ಸಂಬಂಧ ನಡೆದ ಸಭೆಯ ಅಧ್ಯತೆ ವಹಿಸಿ ಮಾತನಾಡಿದರು.

ಹುಲಿಕಲ್​ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಮಾಗಡಿ ತಹಸೀಲ್ದಾರ್​ ಹುಲಿಕಲ್​ ಗ್ರಾಮದ ಸರ್ವೇ ನಂಬರ್​ 127ರಲ್ಲಿ 1.13 ಎಕರೆಜಮೀನನ್ನು ಆಶ್ರಯ ಯೋಜನೆಗಾಗಿ ಮಂಜೂರಾತಿ ಮಾಡಲು ಸ್ಥಳ ಗುರುತಿಸಿ, ಪ್ರಸ್ತಾವನೆಯನ್ನು ರಾಮನಗರ ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಆಶ್ರಯ ಯೋಜನೆಯಡಿ ನಿವೇಶನ ನೀಡಲಾಗುವುದು ಎಂದವರು ತಿಳಿಸಿದರು.

ಡಾ. ಬಿ.ಆರ್​. ಅಂಬೇಡ್ಕರ್​ ಭವನ ನಿರ್ಮಾಣಕ್ಕಾಗಿ ರಾಮನಗರ ತಾಲೂಕು ಕಸಬಾ ಹೋಬಳಿಯ ಅರ್ಚಕರ ಹಳ್ಳಿ ಗ್ರಾಮದ ಸರ್ವೆ ನಂಬರ್​104 ರಲ್ಲಿ ಕಾಯ್ದಿರಿಸಲಾಗಿರುವ 30 ಗುಂಟೆ ಜಮೀನಿಗೆ ಆರ್​.ಟಿ.ಸಿ ಮಂಜೂರಾಗಿದ್ದು, ಭವನ ನಿರ್ಮಾಣಕ್ಕೆಸಂಬಂಧಿಸಿದ ಇಲಾಖೆಯವರು ಕೂಡಲೇ ಕ್ರಮ ವಹಿಸಬೇಕು ಹಾಗೂ ಮಾಗಡಿ ತಾಲೂಕಿನ ನೇರಳೇಕೆರೆ ಗ್ರಾಮದಲ್ಲಿಡಾ. ಬಿ.ಆರ್​. ಅಂಬೇಡ್ಕರ್​ ಭವನ ನಿರ್ಮಿಸಲು 10 ಗುಂಟೆ ಜಮೀನನ್ನು ಗುರುತಿಸುವಂತೆ ತಹಶೀಲ್ದಾರರಿಗೆಸೂಚಿಸಿದರು.

ರಾಮನಗರ ತಾಲೂಕಿನ ಪಾಲಭೋವಿದೊಡ್ಡಿಯಲ್ಲಿ ಪರಿಶಿಷ್ಟ ಜಾತಿಯವರು ಬಳಕೆ ಮಾಡುತ್ತಿರುವಸ್ಮಶಾನ ಭೂಮಿಯ ಒತ್ತುವರಿಯಾಗಿದ್ದು, ಆ ಸ್ಮಶಾನ ಭೂಮಿಯನ್ನು ಸರ್ವೇ ಮಾಡಿ ಒತ್ತುವರಿಯನ್ನು ತೆರವುಗೊಳಿಸುವಂತೆತಹಶೀಲ್ದಾರರು ಹಾಗೂ ಭೂ ಮಾಪನಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲಾ ಅಥವಾ ತಾಲೂಕು ಮಟ್ಟದ ಕಚೇರಿಗಳಿಗೆ ಸಮಸ್ಯೆಗಳ ಪರಿಹಾರಕ್ಕೆಂದುಬರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಸಮಸ್ಯೆಗಳನ್ನು ಸ್ಪಷ್ಟವಾಗಿ ಆಲಿಸಿ, ವಿಳಂಬಕ್ಕೆ ಆಸ್ಪದನೀಡದಂತೆ ಕಾನೂನು ವ್ಯಾಪ್ತಿಯಲ್ಲಿ ಅವುಗಳನ್ನು ಶ್ರೀ ಇತ್ಯರ್ಥ ಪಡಿಸಿ ಸಂತ್ರಸ್ಥರಿಗೆ ಪರಿಹಾರ ಕಲ್ಪಿಸಿಕೊಡಬೇಕು. ಪೊಲೀಸ್​ ಠಾಣೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದದೌರ್ಜನ್ಯ ಪ್ರತಿಬಂಧ ಕಾಯ್ದೆ ಕುರಿತು ವಿವರವುಳ್ಳ ಕರಪತ್ರಗಳನ್ನು ಮುದ್ರಿಸಿ ಠಾಣೆಗೆ ಭೇಟಿ ನೀಡುವವರಿಗೆಅರಿವು ಮೂಡಿಸಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್​ ಜೈನ್​,ಎಎಸ್​ಪಿ ರಾಮಚಂದ್ರಯ್ಯ, ಉಪವಿಭಾಗಾಧಿಕಾರಿ ಬಿನೋಯ್​,ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್​, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಸದಸ್ಯರುಗಳಾದ ಚೆಲುವರಾಜು, ಕುಂಬಾಪುರ ಬಾಬು, ಗೋಪಾಲ ಕೃಷ್ಣ, ಮಹೇಶ್​, ಶಿವಣ್ಣ, ಶಿವಕುಮಾರ್​ ಹಾಗೂಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net