ಅಪಘಾತವಾದ ಬಸ್ನಲ್ಲಿ 36 ಸೀಟ್ಗಳಿಗಷ್ಟೇ ಅವಕಾಶವಿತ್ತು. ಆದರೆ, ಚಾಲಕ ಹೆಚ್ಚುವರಿಯಾಗಿ ಏಳು ಪ್ರಯಾಣಿಕರನ್ನು ಕೂರಿಸಿಕೊಂಡು ಕ್ಯಾಲಿಕಟ್ನಿಂದ ಬಂದಿದ್ದಾನೆ. ಮೃತಪಟ್ಟ ನಾಲ್ವರು ಸೇರಿ ಏಳು ಮಂದಿ ಬುಕ್ಕಿಂಗ್ ಇಲ್ಲದ ಹಿನ್ನೆಲೆಯಲ್ಲಿ ಚಾಲಕನಿಗೆ ಟಿಕೆಟ್ ಹಣವಾಗಿ 1000 ರೂಪಾಯಿ ನೀಡಿ, ಡೆವರ್ ಕ್ಯಾಬಿನ್ನಲ್ಲಿ ಕುಳಿತುಕೊಂಡಿದ್ದರು. ಈ ಏಳು ಮಂದಿ ಪೈಕಿ ನಾಲ್ವರು ಮೃತಪಟ್ಟರೆ, ಇಬ್ಬರು ಗಾಯಗೊಂಡಿದ್ದಾರೆ. ಇನ್ನೋರ್ವ ಅಪಾಯದಿಂದ ಪಾರಾಗಿದ್ದಾನೆ. ರಂಜಾನ್ ಕಾರಣ ಕೇರಳದಿಂದ ಬೆಂಗಳೂರಿಗೆ ಬರುವ ಬಹುತೇಕ ಖಾಸಗಿ ಬಸ್ಗಳಲ್ಲಿ ಸೀಟುಗಳು ಭರ್ತಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗುವ ಧಾವಂತದಲ್ಲಿ ಇವರು ಆಸನಗಳು ಇಲ್ಲದಿದ್ದರೂ ಪರವಾಗಿಲ್ಲ ಎಂದು ಹೆಚ್ಚುವರಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದರು. ಆದರೆ, ದುರದೃಷ್ಟವಶಾತ್ ತಮ್ಮದಲ್ಲದ ತಪ್ಪಿಗೆ ಸಾವಿನ ದಾರಿ ತುಳಿಯುವಂತಾಗಿದೆ.