

ಪ್ರಮುಖ ಮುಖ್ಯಾಂಶಗಳು
ಬಿಡದಿ/ರಾಮನಗರ: ಬಿಡದಿ ಸಮಗ್ರ ಉಪನಗರ ಯೋಜನೆ ವಿರೋಧಿಸಿ ಜೆಡಿಎಸ್‌ನಿಂದ ಬೈರಮಂಗಲದಿAದ ಫ್ರೀಡಂ ಪಾರ್ಕ್ವರೆಗೆ ಹಮ್ಮಿಕೊಂಡಿದ್ದ ಮೂರು ದಿನಗಳ ಪಾದಯಾತ್ರೆಯನ್ನು ಬೆಂಗಳೂರು ನಗರ ಪೊಲೀಸರು ಅನುಮತಿ ನಿರಾಕರಿಸಿ ಎರಡನೇ ದಿನಕ್ಕೆ ಮೊಟಕುಗೊಳಿಸಿದ್ದಾರೆ.
ಎರಡನೇ ದಿನದ ಪಾದಯಾತ್ರೆ ಬಿಡದಿಯ ಬಿಜಿಎಸ್ ವೃತ್ತದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಚಾಲನೆಗೊಂಡಿತ್ತು. ಆದರೆ, ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಗೆ ಒಳಪಡುವ ಕಣಮಿಣಿಕೆ ಗ್ರಾಮದ ಬಳಿಯ ಕ್ರೈಸ್ಟ್ ಕಾಲೇಜು ಎದುರಿನ ಎಂ.ಪಿ ಕಲ್ಯಾಣ ಮಂಪಟದ ಬಳಿ ಬರುತ್ತಿದ್ದಂತೆ ಪೊಲೀಸರು ತಡೆಯೊಡ್ಡಿದ ಕಾರಣ, ಇಲ್ಲಿಯೇ ಅಂತ್ಯಕಂಡಿದೆ.
ಅನುಮತಿ ಇಲ್ಲದ ಕಾರಣ ತಡೆ:
ಎರಡನೇ ದಿನದ ಪಾದಯಾತ್ರೆ ನೈಸ್ ಜಂಕ್ಷನ್ ಬಳಿವರೆಗೆ ಬಂದು ಕೊನೆಯಾಗಿ ಜೆ.ಕೆ.ಗ್ರ್ಯಾಂಡ್ ನಲ್ಲಿ ವಾಸ್ತವ್ಯ ಮಾಡಬೇಕಾಗಿತ್ತು. ಕಣಮಿಣಿಕೆಯ ಎಂಪಿ ಕಲ್ಯಾಣ ಮಂಟಪದ ಬಳಿ ಬೆಂಗಳೂರು ನಗರ ಪೊಲೀಸರು ಪಾದಯಾತ್ರೆಗೆ ತಡೆಯೊಡ್ಡಿದರು. ನಗರ ಪ್ರವೇಶ ಮಾಡಲು ಅನುಮತಿ ಇಲ್ಲದ ಕಾರಣ ಪಾದಯಾತ್ರೆ ಅಂತ್ಯ ಮಾಡಬೇಕೆಂದು ಪೊಲೀಸರು ಸೂಚಿಸಿದರು.
ಈ ವೇಳೆ ಪೊಲೀಸರು ಹಾಗೂ ಶಾಸಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು, ರಸ್ತೆಗೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ನಿಖಿಲ್ ಕುಮಾರಸ್ವಾಮಿ ಹಾಗೂ ಶಾಸಕರು, ಮುಖಂಡರು ಮುಂದೆ ಹೋಗಲು ಪ್ರಯತ್ನ ಮಾಡಿದ್ದರು. ಕೊನೆಗೆ ಪೊಲೀಸರು ನಿಖಿಲ್ ಕುಮಾರಸ್ವಾಮಿ ಹಾಗೂ ಶಾಸಕರ ಮನವೊಲಿಸಿ ಪಾದಯಾತ್ರೆ ನಿಲ್ಲಿಸುವಲ್ಲಿ ಯಶಸ್ವಿಯಾದರು.
18ಕ್ಕೆ ಸಮಾವೇಶ
ಪೊಲೀಸರ ತಡೆ ನಂತರ ಕಾರ್ಯಕರ್ತರು ಹಾಗೂ ರೈತರನ್ನು ಉz್ದÉÃಶಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಮ್ಮ ಪಾದಯಾತ್ರೆಗೆ ವ್ಯಕ್ತವಾಗುತ್ತಿದ್ದ ಜನ ಬೆಂಬಲ ಸಹಿಸದ ಸರ್ಕಾರ ನಮಗೆ ಅನುಮತಿ ನಿರಾಕರಣೆ ಮಾಡಿ ಪೊಲೀಸರ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದೆ. ನಮ್ಮ ಹೋರಾಟ ಇಷ್ಟಕ್ಕೆ ನಿಂತಿಲ್ಲ. ಆ.18ರಂದು ಫ್ರೀಡಂ ಪಾರ್ಕ್ನಲ್ಲಿ ಇದೇ ಟೌನ್ ಶಿಪ್ ವಿಚಾರವಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಸದನದ ಹೊರಗೆ ಹಾಗೂ ಒಳಗೆ ಬೃಹತ್ ಹೋರಾಟ ಮಾಡಲಾಗುತ್ತದೆ ಎಂದು ಹೇಳುವ ಮೂಲಕ ಪಾದಯಾತ್ರೆ ಅಂತ್ಯಗೊಳಿಸಿದರು.